‘ಪಯಣ ಮತ್ತು ಹುಡುಕಾಟ’ ಕೃತಿಯು ಎಸ್. ನಾಗಕಲಾಲ ಅವರ ಕವನಸಂಕಲನವಾಗಿದೆ. ಈ ಕೃತಿಯ ಕುರಿತು ಸರಜೂ ಕಾಟ್ಕರ್ ಅವರು, ಕೆಲವೊಂದು ವಿಚಾರಗಳನ್ನು ಹೀಗೆ ಹೇಳಿಕೊಂಡಿದ್ದಾರೆ: ‘ಭಾಷಣಗಳಲ್ಲಿ ಬುದ್ಧ ಬಸವ ಅಂಬೇಡ್ಕರ ಎನ್ನುತ್ತೇವೆ ಕಾಯಕಗಳಲ್ಲಿ ಎಲ್ಲರನ್ನೂ ಕೊಲ್ಲುತ್ತೇವೆ ಬುದ್ಧನನ್ನು ಎಲ್ಲರನ್ನೂ ಕೊಲ್ಲುತ್ತೇವೆ ಅಂಬೇಡ್ಕರನಿಗೆ ಮೀಸಲಾತಿ ನೀಡುತ್ತೇವೆ’ ಹೀಗೆ ಸಮಾಜದ ದ್ವಿಮುಖ ಮುಖವನ್ನು ಕನ್ನಡಿಯಲ್ಲಿ ತೋರಿಸುತ್ತಾನೆ ಕವಿ. ಒಂದೊಂದು ಸಲ ಗೊತ್ತೇ ಆಗುವುದಿಲ್ಲ; ಯಾವುದು ಮುಖ ಯಾವುದು ಮುಖವಾಡ’ ಎಂದು ನೋವಿನಿಂದ ಹೇಳಿಕೊಳ್ಳುತ್ತಾನೆ. ‘ಎಲ್ಲಾ ಬಿಟ್ಟು ಹೋದ ಸಿದ್ದಾರ್ಥನಿಗೆ ಸಿಕ್ಕ ಸತ್ಯವಾದರೂ ಏನು? ‘ಬದುಕು ನಶ್ವರ’ ಎನ್ನುವುದಾದರೆ ಸಿದ್ಧಾರ್ಥ ಮಾಡಿದ್ದಾದರೂ ಏನು?’ ಎಂಬ ಹೊಸ ಪ್ರಶ್ನೆಯನ್ನು ಬುದ್ದನೆದುರು ಇಡುತ್ತಾರೆ. ‘ಹುಟ್ಟು ಸಾವಿನ ಸತ್ಯ ಸಾವಿರ ವರ್ಷ ಕಳೆದರೂ ಮನುಷ್ಯರ ಕಣ್ಣು ತೆರೆಸಲಿಲ್ಲ ಆದರೆ ಯಾವ ಸತ್ಯ ಸಿದ್ದಾರ್ಥನ ಕಣ್ಣು ತೆರೆಯಿಸಿತು ಆ ಸತ್ಯವಾದರೂ ಯಾವುದೂ? ಎಂದು ಜಿಜ್ಞಾಸೆಯನ್ನು ಕವಿ ತೋರುತ್ತಾನೆ. ನಾನು ಓದಿಕೊಂಡಂತೆ, ಬುದ್ಧನನ್ನು ಈ ರೀತಿಯಲ್ಲಿ ಪ್ರಶ್ನಿಸಿರುವುದು ಕನ್ನಡ ಸಾಹಿತ್ಯದಲ್ಲಿ ನಾಗಕಲಾಲರೇ ಪ್ರಥಮ. ಬುದ್ಧನ ಬಗೆಗಿನ ಪ್ರಿತಿಯೇ ಅವರನ್ನು ಈ ರೀತಿಯಾಗಿ ಪ್ರಶ್ನಿಸುವಂತೆ ಮಾಡಿದೆ ಎಂದಿದ್ದಾರೆ.
ಲೇಖಕ ಎನ್.ವಾಯ್. ಈಳಗೇರ ಅವರು ಮೂಲತಃ ಧಾರವಾಡದವರು. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದಾರೆ. ಎಸ್. ನಾಗಕಲಾಲ ಅವರ ಕಾವ್ಯನಾಮ. ವೃತ್ತಿಯಲ್ಲಿ ಬರಹಗಾರ ಹಾಗೂ ಪತ್ರಕರ್ತರು. ಕೃತಿಗಳು : ಪಾಪದ ಹೂವುಗಳು (ಲೇಖನಗಳು), ಪಯಣ ಮತ್ತು ಹುಡುಕಾಟ( ಕಾವ್ಯ ಸಂಕಲನ), ಕಾಣದ ಕಡಲಿಗೆ (ಕಥಾ ಸಂಕಲನ), ಯುರೊಪ್ ನಾಡಿನಲ್ಲಿ (ಪ್ರವಾಸ ಕಥಾ ಸಂಕಲನ) n-y-elagera ...
READ MORE