‘ರಾಜುಕುಮಾರ ಪಂಚಪದಿ’ ಲೇಖಕ ಮಂಜುನಾಥ ಹಾಲುವಾಗಿಲು ಅವರ ಕೃತಿ. ಈ ಪುಸ್ತಕವು ರಾಜಕುಮಾರ್ ಅವರ ಮೊದಲ ಚಿತ್ರ ಬೇಡರ ಕಣ್ಣಪ್ಪ ದಿಂದ ಪ್ರಾರಂಭಿಸಿ, ಕೊನೆಯ ಚಿತ್ರ ‘ಶಬ್ಧವೇಧಿ’ ಯವರೆಗೂ ಎಲ್ಲಾ ಚಿತ್ರಗಳ ತಾತ್ಪರ್ಯವನ್ನು ಈ ಕೃತಿಯಲ್ಲಿ ಭಿನ್ನವಾಗಿ ವಿವರಿಸಲಾಗಿದೆ. ರಾಜ್ ಕುಮಾರ ಅವರ ಅಭಿಯನದ 209 ಚಿತ್ರಗಳಿಗೂ ಕುರಿತಂತೆ 209 ಪಂಚಪದಿ ಪದ್ಯಗಳಿಂದ ಕೂಡಿರುತ್ತದೆ. ಪಂಚಪದಿ ಎಂದರೆ ಐದು ಸಾಲುಗಳಿಂದ ಕೂಡಿದ ಪದ್ಯವಾಗಿದ್ದು, ಪ್ರತೀ ಸಾಲುಗಳ ಮೊದಲ ಅಕ್ಷರಗಳನ್ನು ಕೂಡಿದಾಗ ‘ರಾಜಕುಮಾರ’ ಎಂದಾಗುವುದು ಹಾಗೂ ಇಡೀ ಚಿತ್ರದ ಕಥಾ ಸಾರಾಂಶ ಒಂದು ಪದ್ಯದಲ್ಲಿ ಅಡಕವಾಗಿರುವುದು ಇನ್ನೊಂದು ವಿಶೇಷವಾಗಿದೆ ಎಂಬುದನ್ನು ಇಲ್ಲಿ ಲೇಖಕರು ವಿವರಿಸುತ್ತಾರೆ.
ಲೇಖಕ ಮಂಜುನಾಥ ಹಾಲುವಾಗಿಲು ಮೂಲತಃ ಹಾಸನದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ಪದವೀಧರರು. ಓದು-ಬರಹ ಅವರ ಆಸಕ್ತಿ ಕ್ಷೇತ್ರಗಳು. ಕೃತಿಗಳು: ರಾಜಕುಮಾರ ಪಂಚಪದಿ, ರಾಜಾ ಕೆಂಪೇಗೌಡ ...
READ MORE