'ನದಿಯ ಹುಡುಕಾಟ’ ಅಶೋಕ್ ಅಗಿಲ್ ಅವರ ಅನುವಾದಿತ ಕವನಸಂಕಲನವಾಗಿದೆ. ಅಶೋಕ್ ಅಗಿಲ್ ಅವರ ಸಶಕ್ತವಾದ ಅನುವಾದ, ಮೂಲ ಕವಿತೆಗಳ ಸಹಜತೆ ಎಲ್ಲೂ ಮುಕ್ಕಾಗದಂತೆ ತಡೆದಿವೆ. ಅಲ್ಲಲ್ಲಿ ಬಳಸಿರುವ ಕನ್ನಡದ್ದೆ ಆಡು ನುಡಿಗಳು ಮೂಲ ಕವಿತೆಗಳ ಓಘಕ್ಕೆ ಒಗ್ಗಿಕೊಂಡಿವೆ. ಮೂಲ ಕವಿತೆಗಳ ಸಾರ್ವಕಾಲಿಕ ಗುಣವನ್ನು ಅಶೋಕ್ ಅಗಿಲ್ ಅವರು ಅವುಗಳ ಸಶರೀರ ಆತ್ಮದ ನಾಡಿಮಿಡಿತ ಹಿಡಿದು ಕನ್ನಡದ್ದಾಗಿಸಿದ್ದಾರೆ. ಹಾಗಾಗಿ 'ಭೂಮಿ ಪೆದಾಲ ಪೈ' ಕವನಸಂಕಲನ ಬರೆದ ಬಾಲಸುಧಾಕರ್ ಮೌಳಿ ಹಾಗೂ ಅದನ್ನು ಕನ್ನಡಕ್ಕೆ ಅನುವಾದಿಸಿದ ಅಶೋಕ್ ಅಗಿಲ್ ಇಬ್ಬರಿಗೂ ಕನ್ನಡದ ಓದುಗ ಲೋಕದ ಕೃತಜ್ಞತೆಗಳು. -ದಾದಪೀ ಜೈಮನ್
ಅಶೋಕ್ ಅಗಿಲ್ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವರು. ಪಿಯುಸಿ ಶಿಕ್ಷಣವನ್ನು ಚಳ್ಳಕೆರೆಯಲ್ಲಿ ಪೂರೈಸಿದರು. ಪ್ರಸ್ತುತ ಮಧುಗಿರಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾರೆ. ‘ನದಿಯ ಹುಡುಕಾಟ’ ಅವರ ಮೊದಲ ಅನುವಾದಿತ ಕೃತಿಯಾಗಿದೆ. ಸಾಹಿತ್ಯದ ಜೊತೆಗೆ ಚಿತ್ರಕಲೆ , ಸಿನಿಮಾ ಅವರ ಆಸಕ್ತಿಯ ಕ್ಷೇತ್ರವಾಗಿದೆ. ಕೃತಿಗಳು: ನದಿಯ ಹುಡುಕಾಟ ...
READ MORE