ಚಿಲಿಪಿಲಿ ಶ್ರೀಗಂಧ

Author : ಚಂದ್ರಗೌಡ ಕುಲಕರ್ಣಿ

Pages 408

₹ 400.00




Year of Publication: 2024
Published by: ಚಿಲಿಪಿಲಿ ಪ್ರಕಾಶನ
Address: ಶಿವಾನಂದ ನಗರ, 4ನೇ ಅಡ್ಡ ರಸ್ತೆ, ಧಾರವಾಡ
Phone: 9448022950

Synopsys

‘ಚಿಲಿಪಿಲಿ ಶ್ರೀಗಂಧ’ ಕೃತಿಯು ಚಂದ್ರಗೌಡ ಕುಲಕರ್ಣಿ ಅವರ ಈವರೆಗಿನ ಮಕ್ಕಳ ಕವಿತೆಗಳಾಗಿವೆ. ಕವಿಗೆ ಕನ್ನಡ ನುಡಿಯ ಮೇಲಿರುವ ಪ್ರೀತಿ ಇಲ್ಲಿ ವ್ಯಕ್ತವಾಗಿದ್ದು, ಮಕ್ಕಳಿಗೆ ಇಷ್ಟವಾಗುವಂತೆ ಕವಿತೆಗಳನ್ನು ಪೋಣಿಸಿದ್ದಾರೆ. ‘ಕೋಸು ಕಂದನ ರಾಗಲಯವನು, ಹಾಸು ಕೌದಿಯ ಕಸೂತಿ ಸೊಗಸನು, ಖಾಸ ಪದದಲಿ ಪದಮೂಡಿಸುವ ಕನ್ನಡ ನುಡಿ ಚಂದ, ಚಿಲಿಪಿಲಿ ಶ್ರೀಗಂಧ ಎನ್ನುತ್ತ ಅಮ್ಮನ ಜೋಗುಳ ಹಾಡಿನ ಕಂಪನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಇನ್ನು ಮಕ್ಕಳಿಗೆ ಕವಿತೆ ಏತಕ್ಕೆ ಬೇಕು ಎನ್ನುವ ಕವಿ ಇಲ್ಲಿ ಹಲವಾರು ನಿದರ್ಶನಗಳನ್ನು ನೀಡುತ್ತಾರೆ. ಇಂದು ಬಹುತೇಕ ಮಕ್ಕಳು ಮಕ್ಕಳಾಗಿ ಬೆಳೆಯುತ್ತಿಲ್ಲ. ಕಾರಣ ಪಾಲಕ ಪೋಶಕರು ಅವರ ಮಕ್ಕಳ ಬಗ್ಗೆ ತೆಗೆದುಕೊಳ್ಳುತ್ತಿರುವ ಕಾಳಜಿ ತುಂಬಾ ಅತಿಯಾಗಿರುವುದು; ಇಲ್ಲವೇ ಅಸಡ್ಡೆಯಿಂದ, ಅನಾದರತೆಯಿಂದ ಕೂಡಿರುವಂಥದು. ಪರರ ದೂಷಣೆ, ಹೀಗಳೆಯುವಿಕೆ, ವೈರ, ಮತ್ಸರಗಳು ಬೆಳೆವ ಮಕ್ಕಳ ವ್ಯಕ್ತಿತ್ವದಲ್ಲಿ ಕಪ್ಪು ಚುಕ್ಕೆಗಳಾಗಿ ಅಂಟಿಕೊಂಡು ಬಿಡುತ್ತವೆ. ಈ ರೀತಿ ಅಂಟಿಕೊಂಡ ಚುಕ್ಕೆಗಳು ಇಮ್ಮಡಿಗೊಳ್ಳುತ್ತ ವ್ಯಕ್ತಿಯ ವ್ಯಕ್ತಿತ್ವ ಮಾಸಲಾಗಿ; ಕಪ್ಪು ಚುಕ್ಕೆಗಳಾಗಿ ಮಾರ್ಪಡಾಗುತ್ತದೆ. ಇಂತಹ ಕಪ್ಪು ಚುಕ್ಕೆಗಳು ಶುಭ್ರವಾಗಬೇಕಾದರೆ ಕಾವ್ಯ ಲವಣದ ಅಗತ್ಯವಿದೆ. ಮಕ್ಕಳ ಮನಕ್ಕೆ ಮುದ ನೀಡುತ್ತಲೇ, ಪೋಷಿಸಿ ಶುಭ್ರ ವ್ಯಕ್ತಿತ್ವ ರೂಪಿಸಿಕೊಂಡು ಬೆಳೆಯಲು ಬೇಕಾದ ಲವಣಗಳು ಮತ್ತು ಪೋಷಕಾಂಶಗಳು ಈ ಕವನ ಸಂಕಲನದಲ್ಲಿ ಹೇರಳವಾಗಿರುವುದನ್ನು ಕಾಣಬಹುದು.

About the Author

ಚಂದ್ರಗೌಡ ಕುಲಕರ್ಣಿ

ಕವಿ, ಲೇಖಕ ಚಂದ್ರಗೌಡ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದವರು. ಹುಟ್ಟೂರು, ಅಮರಗೋಳ, ಧಾರವಾಡ ಹಾಗೂ ನರಗುಂದದಲ್ಲಿ ಶಿಕ್ಷಣ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವೀಧರರು. ವಿಜಯಪುರ ಜಿಲ್ಲೆಯ ತಾಳಿಕೋಟೆಯ ಖಾಸ್ಗತೇಶ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರು.   ಕಥೆ,ಕವನ,  ಪ್ರಾಸಬಂಧ, ಪದಬಂಧ, ಪದಶೋಧ, ಪದಚಲ್ಲಾಟ, ಅಕ್ಷರ ಸುಡೋಕು, ಹುಡುಕಾಟ - ತೊಡಕಾಟ ಅಂಕ ಮೋಡಿಯಲ್ಲಿ ಬೆರೆತ ಮನಸಿಗೆ ಜನಪದ ಲೆಕ್ಕ - ಕವಡ ಕಂಟಗ ಲೆಕ್ಕ, ಒಗಟು, ಬೆಡಗು, ಭಾಷಾ ಚಮತ್ಕಾರ, ಮೋಜಿನ ಮಾಯಾ ಚೌಕ ಹೀಗೆ ವಿವಿಧ ವಲಯದಲ್ಲಿ ಆಸಕ್ತಿ. ದೂರದರ್ಶನದ ಬೆಳಗು ...

READ MORE

Related Books