ಭೂಮಿ ತೂಕದ ಪ್ರೀತಿ

Author : ಮೋದೂರು ತೇಜ

Pages 136

₹ 100.00




Year of Publication: 2011
Published by: ಶ್ರೀಸಾಯಿ ಸಾಹಿತ್ಯ
Address: 625, 9ನೇ ಡಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು- 560104
Phone: 08023403307

Synopsys

‘ಭೂಮಿ ತೂಕದ ಪ್ರೀತಿ’ ಕವಿ ಮೋದೂರು ತೇಜ ಅವರ ಕವನ ಸಂಕಲನ. ಈ ಕೃತಿಗೆ ಲೇಖಕ ಅರುಣ ಜೋಳದಕೂಡ್ಲಿಗಿ ಬೆನ್ನುಡಿ ಬರೆದು ‘ವೇದಾವತಿ ನದಿ ತೀರದ ಪರಿಸರದಲ್ಲಿ ಬೆಳೆದ ಮೋದೂರು ತೇಜ ಅವರು ನದಿಯ ತೇವ ಒಣಗುತ್ತಿರುವಾಗ, ನೀರ ಸೆಲೆ ಅರಸಿ ಒರತೆಗಳನ್ನು ತೋಡುತ್ತಾ, ಪ್ರೀತಿಯ ಜೀವ ಜಲವನ್ನು ಹುಡುಕುವಂತಿದೆ ಇಲ್ಲಿನ ಕಾವ್ಯಯಾನ’ ಎಂದು ಪ್ರಶಂಸಿಸಿದ್ದಾರೆ.

ಯಾಂತ್ರಿಕ ಜಗತ್ತಿನ ಕೃತಕತೆ, ಮಾನವೀಯ ಗುಣಗಳೂ ವ್ಯವಹಾರಿಕ ಮುಖ ಪಡೆವ ಆತಂಕ ಈ ಕವಿತೆಗಳ ಬೆನ್ನಿಗಿದೆ. ಹಾಗಾಗಿ ಇವುಗಳಿಗೆ ಎದುರಾಡುವ ಬದಲು, ನಿಜ ಪ್ರೀತಿಯ ತೋರುವುದು ಕವಿಯ ತುರ್ತಾಗಿ ಕಾಣುತ್ತದೆ ಇಲ್ಲಿನ ಕವಿತೆಗಳ ಒಳಹರಿವು ಪ್ರೀತಿಯದು. ಕಥನದಲ್ಲಿ ತನ್ನ ಕಾಲದ ವಿಘಟನೆಯನ್ನೂ, ಆದ್ರಗೊಳ್ಳುತ್ತಿರುವ ಹಳ್ಳಿಯ ಬದುಕನ್ನು ಹಿಡಿಯುವ ತೇಜ ಅವರು, ಕಾವ್ಯ ಮಾಧ್ಯಮವನ್ನು ಪ್ರೀತಿಯ ಹುಡುಕಾಟಕ್ಕಾಗಿಯೇ ದುಡಿಸಿಕೊಂಡಂತಿದೆ. ಹಾಗಾಗಿಯೇ ನಿನ್ನೆರಡು ಕಣ್ಣ ಕಡಲಿನಲಿ, ನನ್ನಾಸೆಯ ನೂರು ನದಿಗಳು ಎನ್ನುತ್ತಾರೆ ಎಂದು ಕವಿತೆಗಳ ಅರ್ಥವಂತಿಕೆಯನ್ನು ಶ್ಲಾಘಿಸಿದ್ದಾರೆ.

About the Author

ಮೋದೂರು ತೇಜ

ಲೇಖಕ ಮೋದೂರು ತೇಜ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಕರ್ನಾಟಕ -ಆಂಧ್ರ ಗಡಿಭಾಗದ ಮೋದೂರು ಗ್ರಾಮದವರು. ಪ್ರಾಥಮಿಕ -ಪ್ರೌಢ ಶಿಕ್ಷಣವನ್ನು ಮೋದೂರು, ಜಾಜೂರು, ಚಳ್ಳಕೆರೆ, ಹಾಗೂ ಚಿಕ್ಕಮಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಮೈಸೂರಿನ ಮುಕ್ತ ವಿ.ವಿ.ಯಿಂದ ಎಂ.ಎ ಪದವಿ ಪಡೆದರು.  ಕೃತಿಗಳು:  ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದೊಂದಿಗೆ ಪ್ರಕಟಿತ ಕವನ ಸಂಕಲನ-‘ಮರದೊಳಗಣ ಕಿಚ್ಚು (2007). ಬುದ್ಧನ ಮೇಲೂ ಯುದ್ಧ’(2010), ಭೂಮಿ ತೂಕದ ಪ್ರೀತಿ(2011), ಅರ್ಧಕ್ಕೆ ನಿಂತ ಚಿತ್ರ (2013), ಹುಲಿವೇಷ ಇವು ಕಥಾ ಸಂಕಲನಗಳು, ವೇದಾವತಿ ತೀರದಲ್ಲಿ (2011) ಹಾಗೂ ತುದಿ ಇರದ ಹಾದಿ-ಇವು ಕಾದಂಬರಿಗಳು, ನಾಡಿನ ವಿವಿಧ ಪತ್ರಿಕೆಗಳು ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ  ...

READ MORE

Related Books