ಕರಗದೀ ಕಾರಿರುಳು

Author : ಕುಸುಮ ಕರಾಳೆ

Pages 104

₹ 28.00




Year of Publication: 1997
Published by: ಮಹಿಳಾ ಸಾಹಿತ್ಯಿಕಾ
Address: ನವನಗರ, ಹುಬ್ಬಳ್ಳಿ.

Synopsys

ಲೇಖಿಕಾ ಬಳಗವು ಬರೆದ ಸಾಹಿತ್ಯ ಪ್ರಕಟಣೆಗಾಗಿ ಹುಬ್ಬಳ್ಳಿಯಲ್ಲಿ ಹುಟ್ಟಿಕೊಂಡ ಸಂಸ್ಥೆ -ಮಹಿಳಾ ಸಾಹಿತ್ಯಿಕಾ. ಅದರಡಿ ಪ್ರಕಟಣೆಯಾದ ಕೃತಿ -ಕರಗದೀ ಕಾರಿರುಳು. ಕವಿ ಕುಸುಮ ಕರಾಳೆ. ಬದುಕಿನಲ್ಲಿ ತಾವು ಕಂಡುಂಡ ಸುಖ-ದುಃಖ, ನೋವು-ನಿರಾಶೆ ಹೀಗೆ ಎಲ್ಲವನ್ನು ಭಾಷೆಯಲ್ಲಿ ಹಿಡಿದಿಟ್ಟಿದ್ದರ ಫಲವೇ ಈ ಕವಿತೆಗಳು. ಇಲ್ಲಿ ನವಿರಾದ ಭಾವಗಳಿವೆ. ಗಡಸು ನಿರ್ಧಾರಗಳಿವೆ. ಸೂಕ್ಷ್ಮ ಸಲಹೆಗಳಿವೆ. ಕಳೆದುಕೊಂಡ ನಿರಾಶೆಗಳಿವೆ. ಮುಂದೇನು ಎಂಬ ಆತಂಕ ಮಡುಗಟ್ಟಿದೆ. ಕೆಂಗಡಿಸುವ ದ್ವಂದ್ವಗಳು ಅಗಣಿತವಾಗಿವೆ. ‘ಜೊತೆಗಾರನಿಲ್ಲ, ನಲಿವಿಲ್ಲ, ನೋವು ತುಂಬಿ ಹರಿದಿದೆ’, ಮೋಕವೇದನೆಯ ಶೋಕ ಆ ದೇವರೊಬ್ಬನೇ ಬಲ್ಲನು ಒಡಲಾಳದಲ್ಲಿ ಬಿದ್ದಿದೆ ಬೆಂಕಿ ಹೇಳಲಾರೆನು ಎಲ್ಲನು!, ಒಮ್ಮೆ ನಿನಗಾಗಿ ಮತ್ತೊಮ್ಮೆ ನನಗಾಗಿ ಅಳುತಿರುವೆನು, ಇದು ನಮ್ಮ ಹಣೆಬರೆಹ ಹೇಳು ದೂರುವುದು ಯಾರನು?’ ಇಂತಹ ಕವಿತೆಗಳು ಸಂಕಲನದ ಸೂಕ್ಷ್ಮತೆಯನ್ನು ಹೆಚ್ಚಿಸಿವೆ. ಇಂತಹ ಭಾವ ಕಚಗುಳಿಯ ಒಟ್ಟು 90 ಕವಿತೆಗಳು ಇಲ್ಲಿ ಸಂಕಲನಗೊಂಡಿವೆ. 

ಸಂಕಲನಕ್ಕೆ ಮುನ್ನುಡಿ ಬರೆದ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ‘ಇಲ್ಲಿಯ ಕವಿತೆಗಳು ಓದುಗರ ಮನಸ್ಸಿನಲ್ಲಿ ಭಾವ ವರ್ತುಳವನ್ನು ನಿರ್ಮಿಸುತ್ತವೆ. ವಯಸ್ಸು, ಅನುಭವ, ನೋವುಗಳಿಗೆ ಕರಾಳವಾದುದನ್ನು ಕುಸುಮಗೊಳಿಸುವ ಶಕ್ತಿ ಇವುಗಳಿಗಿದೆ. ಅಳಲು ಬಾಧಿಸಿದಾಗ ಅದಕ್ಕೆ ಕೊರಳಾಗುತ್ತವೆ. ಕೊರಳಾದ ಭಾವಗಳೇ ಕಾವ್ಯವಾಗುತ್ತವೆ. ತತ್ವಶಾಂತಿಯಾಗುತ್ತವೆ. ಇಲ್ಲಿಯ ಕವಿತೆಗಳು ಈ ನಿಟ್ಟಿನಲ್ಲಿ ಸಾಗಿವೆ’ ಎಂದು ಪ್ರಶಂಸಿಸಿದ್ದಾರೆ.

 

 

About the Author

ಕುಸುಮ ಕರಾಳೆ

ಕುಸುಮ ಕರಾಳೆ ಅವರು ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಉಪನ್ಯಾಸಕಿ. ಇವರ ಮೊದಲ ಕವನ ಸಂಕಲನ-ಕರಗದೀ ಕಾರಿರುಳು.  ...

READ MORE

Related Books