ಚಂದ್ರಶೇಖರ ಪಾಟೀಲ ಆಯ್ದ ಕವನಗಳು

Author : ಚಂದ್ರಶೇಖರ ಪಾಟೀಲ (ಚಂಪಾ)

Pages 160

₹ 13.00




Year of Publication: 1978
Published by: ಪಿ.ಎ.ಎನ್.ಪಬ್ಲಿರ್ಷಸ್
Address: 19, ಜೆ.ಸಿ. ರೋಡ್‌, ಬೆಂಗಳೂರು

Synopsys

ಕವಿ ಚಂದ್ರಶೇಖರ ಪಾಟೀಲರ ಆಯ್ದ ಕವನಗಳ ಸಂಕಲನ. ಭಗವಾನ್‌ ಹಾಗೂ ಶಿವರಾಮು ಕಾಡನಕುಪ್ಪೆ ಈ ಕೃತಿಯ ಸಂಕಲನ ಮಾಡಿದ್ದಾರೆ. ಪಾಟೀಲರ ’ಬಾನುಲಿ’, ’ಮಧ್ಯಬಿಂದು’, ’ಹತ್ತೊಂಬತ್ತು ಕವನಗಳು’, ’ಗಾಂಧೀಸ್ಮರಣೆ’, ’ಓ ಎನ್ನ ದೇಶಬಾಂಧವರೇ’ ಕವನ ಸಂಕಲನದ ಆಯ್ದ ಕವನಗಳು ಈ ಸಂಕಲನದಲ್ಲಿವೆ. ʼಬಾನುಲಿʼ (೧೯೫೭-೧೯೬೦) ಕವನ ಸಂಕಲನದ ಹತ್ತು ಕವಿತೆಗಳು, ’ಮಧ್ಯಬಿಂದು’ (೧೯೬೦-೧೯೬೪) ಸಂಕಲನದ ಹದಿನಾಲ್ಕು ಕವಿತೆಗಳು ಹಾಗೂ ʼಹತ್ತೊಂಬತ್ತು ಕವನಗಳುʼ (೧೯೬೪-೧೯೬೭) ಕವನ ಸಂಕಲನದ ಹನ್ನೊಂದು ಕವಿತೆಗಳು, ’ಗಾಂಧಿಸ್ಮರಣೆ’ (೧೯೬೭-೧೯೭೬) ಹಾಗೂ ’ಓ ಎನ್ನ ದೇಶ ಬಾಂಧವರೆ’ (೧೯೭೬-೧೯೭೭) ಸಂಕಲನದ ಹತ್ತು ಕವಿತೆಗಳಿವೆ.

’ಬಾನುಲಿ’ಯಿಂದ ’ಓ ಎನ್ನ ದೇಶಬಾಂಧವರೇ’ ವರೆಗಿನ ಸಂಕಲನಗಳ ಕಾವ್ಯದ ಮಜಲುಗಳು ಕೂತೂಹಲಕಾರಿ’ ಎಂದು ಹಿನ್ನುಡಿಯಲ್ಲಿ ಬರೆದಿರುವ ಸಂಪಾದಕರು ’ಪಾಟೀಲರು ವೈಯಕ್ತಿಕ ಬೆಳವಣಿಗೆಯೊಂದಿಗೆ ತಮ್ಮ ಸುತ್ತಮುತ್ತಲಿನ ಬದುಕಿನ ಬದಲಾವಣೆಗೆ ತಮ್ಮ ಕಾವ್ಯದಲ್ಲಿನ ಬರಹಗಳನ್ನು ಗಮನಿಸಬಹುದು’ ಎಂದು ವಿವರಿಸಿದ್ದಾರೆ. ’ಪಾಟೀಲರ ಕಾವ್ಯದ ಮೂಲಧೋರಣೆ ವ್ಯಂಗ್ಯವಾದರೂ ಅದು ಅಭಿವ್ಯಕ್ತಿ ಪಡೆದುಕೊಳ್ಳುವ ರೀತಿ ತುಂಬಾ ಸುಸಂಸ್ಕೃತವಾಗಿದೆ.  ಈ ಸಂಕಲನದ ಬಹುಪಾಲು ಕವಿತೆಗಳು ರಾಜಕೀಯ ಪ್ರಜ್ಞೆಯಿಂದ ಮೂಡಿ ಬಂದಿವೆ. ವ್ಯವಸ್ಥೆಯ ಆಜ್ಞಾನ ಗುರುತಿಸಿ ಅದರಲ್ಲಿ ಒಂದು ಸಾಂಗತ್ಯ ತರಬೇಕೆಂಬ ಜೀವಂತ ಕಳಿಕಳಿಯಿಂದ ಹೊರಡುವ ಕವಿ, ಅದರ ಅಂಟುಗುಂಟುಗಳ ವಿರುದ್ಧ ಸಿಡಿಯುತ್ತಾರೆ. ಕವಿಯ ಈ ಸಿಡಿತದ ಪ್ರಕ್ರಿಯೆ ಅಭಿವ್ಯಕ್ತಿಯಾಗಿ ಕವನ ಸೃಷ್ಟಿಯಾಗುತ್ತದೆ’ ಎಂದು ಭಗವಾನ್‌ ಮತ್ತು ಶಿವರಾಮ ಕಾಡನಕುಪ್ಪೆ ಬರೆದಿದ್ದಾರೆ. 

About the Author

ಚಂದ್ರಶೇಖರ ಪಾಟೀಲ (ಚಂಪಾ)
(18 July 1939 - 10 January 2022)

'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ.   ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...

READ MORE

Related Books