‘ಭಾವರೇಖೆ ( ಒಂದು ಅನಂತ ಭಾವ) ನಂಕು ಅವರ ಕವನಸಂಕಲನವಾಗಿದೆ. ಇದಕ್ಕೆ ಡಾ. ಶಿವಲಿಂಗೇಗೌಡ ಡಿ. ಅವರ ಬೆನ್ನುಡಿ ಬರಹವಿದೆ; ಈ ಕವನಸಂಕಲನದ ಕವಿತೆಗಳು ಪ್ರೀತಿಯ ಧ್ಯಾನದಲ್ಲಿ ಹುಟ್ಟಿದಂತವು. ಪ್ರೀತಿ, ಪ್ರೇಮ, ವಿರಹಗಳ ಸುತ್ತ ಹೆಣೆದಿರುವ ಈ ಕವಿತೆಗಳು ಪ್ರೀತಿಯ ಹುಡುಕಾಟದಲ್ಲಿ ತೊಡಗಿವೆ. ಪ್ರೀತಿಗಾಗಿ ಹಂಬಲಿಸುವ ಕನವರಿಸುವ, ಕಾತರಿಸುವ ಕವಿ ಎಲ್ಲದರಲ್ಲಿಯೂ ಪ್ರೀತಿಯನ್ನಲ್ಲದೆ ಬೇರೇನನ್ನೂ ಕಾಣಲಾರ.
ಕೊನೆಗೆ ಪ್ರೀತಿಯನ್ನಲ್ಲದೆ ಬೇರೇನನ್ನೂ ನೀಡಲಾರ. ಮೇಲ್ನೋಟಕ್ಕೆ ಹೆಣ್ಣಿನ ಪ್ರೀತಿಯ ಹಂಬಲದಿಂದ ಹುಟ್ಟಿದ ಕವಿತೆಗಳಂತೆ ಕಂಡರೂ ಆ ಸೀಮಿತ ನೆಲೆಗೆ ನಿಲ್ಲದೆ ವಿಶ್ವಪ್ರೀತಿಯ ನೆಲೆಗೆ ವಿಸ್ತಾರಗೊಳ್ಳುವುದು ಇಲ್ಲಿನ ಕವಿತೆಗಳ ವಿಶೇಷ.
ಕವಿಗೆ ಪ್ರೀತಿ ಎಂದರೆ 'ಬೆಳಕು'. ಆ ಬೆಳಕಿನ ಹುಡುಕಾಟ, ಜೀವಪ್ರೀತಿಯ ಹುಡುಕಾಟವೂ ಆಗಿದೆ. ಪ್ರೀತಿ ಒಂದು ಅಗಾಧ ಚೈತನ್ಯ ಅದು ಮಾಗಿ, ಪರಿಪಕ್ವಗೊಂಡು ಅರಳಬೇಕು, ಎಲ್ಲರ ಹೃದಯವನ್ನೂ ಬೆಳಗಬೇಕು ಎಂಬುದು ಕವಿಯ ಆಶಯ. ಪ್ರೀತಿಯನ್ನು ಎಲ್ಲದರಲ್ಲೂ ಅರಸುವ, ಎಲ್ಲರಿಗೂ ಹಂಚುವ ಉತ್ಕಟ ಭಾವ ಇಲ್ಲಿನ ಕವಿತೆಗಳ ಆಂತರ್ಯದೊಳಗಿದೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
ಪ್ರೀತಿಯ ಪಕ್ಷತೆ ಮತ್ತು ಪರಿಶುದ್ಧತೆಯ ಹೊಸ ಕಾಷ್ಠೆಯನ್ನು ಕಟ್ಟುವ ಪ್ರಯತ್ನದಲ್ಲಿರುವ 'ನಂಕು' ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯುವಕವಿ ನಂದನ ಕುಪ್ಪಳಿ ಅವರು ಜನಿಸಿದ್ದು 1993 ಜನವರಿ 11 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಕುಪ್ಪಳಿಯಲ್ಲಿ. ತಂದೆ ರಾಮಸ್ವಾಮಿ ಕೆ.ಎಸ್., ತಾಯಿ ಯಶೋಧ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹಿರೇಕೂಡಿಗೆಯಲ್ಲಿ ಮುಗಿಸಿದ ಇವರು ಪದವಿಪೂರ್ವ ಮತ್ತು ಬಿ.ಎ. ಪದವಿ ಶಿಕ್ಷಣವನ್ನು ತೀರ್ಥಹಳ್ಳಿಯ ಸರ್ಕಾರಿ ಕಾಲೇಜುಗಳಲ್ಲಿ ಪಡೆದರು. ನಂತರ ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಇಡಿ. ಪದವಿಯನ್ನೂ ಹಾಗೂ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನೂ ಪಡೆದಿದ್ದಾರೆ. ಕುವೆಂಪು ಅವರ ...
READ MORE