ಕವಯತ್ರಿ ಲಕ್ಷ್ಮಿ ಕೆ. ಅವರು ತಮ್ಮ ಅಂತರಂಗದಲ್ಲಿ ಹುಟ್ಟಿದ ಭಾವನೆಗಳನ್ನು ಸಶಕ್ತ ಪದಗಳಲ್ಲಿ ಕಟ್ಟಿ ಕೊಡುವ ಮೂಲಕ, ವರ್ತಮಾನಕ್ಕೆ ಕನ್ನಡಿ ಹಿಡಿದಿದ್ದಾರೆ. ‘ಕವಿತೆ' ಎನ್ನುವ ಕವಿತೆಯಲ್ಲಿ ನಾನು ಕವಿತೆ..... ಹೇಳಲಾರದ ಕಥೆಗಳನ್ನು ಬಿಡಿಸಲಾರದ ಒಗಟುಗಳನ್ನು ಅತ್ತು ಮುಗಿಸಲಾರದ ಭಾವಗಳ ಹೃದಯದೊಳಗಿಟ್ಟು ಅಳುವ ಕವಿತೆ ಎನ್ನುತ್ತಾರೆ. ಯಾವುದೋ ಕಾರಣಕ್ಕಾಗಿ ನೋವು ನುಂಗುತ್ತಾ ಅದನ್ನೇ ಕವಿತೆಯಾಗಿಸಿದ ಪರಿ ಈ ಸಾಲುಗಳಲ್ಲಿದೆ.
ಲಕ್ಷ್ಮಿ ಕೆ. ಅವರು ಮೂಲತಃ ಮಂಜೇಶ್ವರದವರು. ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿ. ದ್ರಾವಿಡ ಭಾಷೆಗಳನ್ನು ಬಲ್ಲವರು. ‘ಮರುಭೂಮಿಯ ಮಳೆ ಹನಿಗಳು’ ಅವರ ಕವನ ಸಂಕಲನ. ...
READ MORE