ಮೊದಲ ಸಿರಿ

Author : ಲಲಿತಾ ಸಿದ್ದಬಸವಯ್ಯ

Pages 52

₹ 42.00




Year of Publication: 2001
Published by: ಚಿನ್ಮಯಿ ಪ್ರಕಾಶನ
Address: #5217, ಗುರುಸನ್ನಿಧಿ, 2ನೇ ಕ್ರಾಸ್ ಅಶೋಕ ನಗರ, ತುಮಕೂರು-572102
Phone: 95816229525

Synopsys

‘ಮೊದಲ ಸಿರಿ’ ಲಲಿತಾ ಸಿದ್ಧಬಸವಯ್ಯ ಅವರ ಕವನ ಸಂಕಲನ. ಈ ಸಂಕಲನಕ್ಕೆ ಡಾ.ಜಿ.ಎಸ್. ಶಿವರುದ್ರಪ್ಪ ಅವರ ಬೆನ್ನುಡಿ ಮಾತುಗಳಿವೆ. ಕವಿತೆಗಳ ಕುರಿತು ಬರೆಯುತ್ತಾ ‘ಮೊದಲು ಹೇಳಬೇಕಾದ ಮಾತೇನೆಂದರೆ, ನಿಮ್ಮ ಮೊದಲ ಕವನ ಸಂಗ್ರಹದ ಸಂದರ್ಭದಲ್ಲಿಯೇ ಎಂಥ ಸಿರಿಯನ್ನು ಸೂರೆಗೈದಿದ್ದೀರಿ. ನಿಮ್ಮ ಕವನ ಸಂಗ್ರಹದ ಶೀರ್ಷಿಕೆ ಈ ಅರ್ಥದಲ್ಲಿ ಸಾಂಕೇತಿಕವಾಗಿಯೂ ಇದೆ’ ಎಂದಿದ್ದಾರೆ ಜಿ.ಎಸ್. ಎಸ್. ಹಾಗೇ ಕಾವ್ಯವನ್ನು ಕಟ್ಟುವ ಕಲೆಗಾರಿಕೆಯ ಮೇಲೆ ನಿಮಗೆ ಇರುವ ಹಿಜಿತ ವಿಶೇಷ ರೀತಿಯದೆಂದು ನನ್ನ ತಿಳುವಳಿಕೆ. ಮೊದಲ ಸಂಗ್ರಹದಲ್ಲೇ ಸಹಜ ಕವಿತೆಯ ವಿಲಾಸ ನಿಮ್ಮ ಬಹುತೇಕ ಕವಿತೆಗಳ ಬಂಧದಲ್ಲಿ ಮೈದೋರಿದೆ. ವರ್ತಮಾನಜ ಸರಳ ಸಾಮಾನ್ಯ ಸಂಗತಿಗಳನ್ನು, ಅವುಗಳ ಒಳ ವಿವರಗಳೊಂದಿಗೆ, ಕವಿತೆಯನ್ನಾಗಿ ಕಟ್ಟುವ ಕೌಶಲ ನಿಮಗೆ ಕರಗತವಾಗಿದೆ ಮತ್ತು ಬರಹದಲ್ಲಿ ಯಾವ ತೊಡಕುಗಳಿಗೂ ಸಿಕ್ಕಿಹಾಕಿಕೊಳ್ಳದ ಒಂದು ಲವಲವಿಕೆ ಇದೆ. ಇಷ್ಟಿದ್ದರೆ ಬೇಕಾದಷ್ಟಾಯಿತು. ಕವಿತೆಯ ಹಾದಿಯಲ್ಲಿ ಹೆಜ್ಜೆಯಿಡುತ್ತಿರುವ ನಿಮ್ಮಂಥವರಿಗೆ, ಮುಂದೆ ನಡೆಯಿರಿ ಎಂದು ಬರವಸೆಯ ಮಾತುಗಳನ್ನಾಡಿದ್ದಾರೆ.

About the Author

ಲಲಿತಾ ಸಿದ್ದಬಸವಯ್ಯ
(27 February 1955)

ಕವಯತ್ರಿ ಲಲಿತಾ ಸಿದ್ದಬಸವಯ್ಯ ಅವರು  ಬಿ.ಎಸ್ಸಿ. ಪದವೀಧರೆ. 27-02-1955 ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ, ತಾಯಿ ಪುಟ್ಟಮ್ಮಣ್ಣಿ. ‘ಮೊದಲ ಸಿರಿ, ಇಹದ ಸ್ವರ, ಬಿಡಿಹರಳು (ಹನಿಗವನಗಳು), ಕಬ್ಬಿನೆಲ, ದಾರಿನೆಂಟ, ಇನ್ನೊಂದು ಸಭಾಪರ್ವ’ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ‘ಮಿ. ಛತ್ರಪತಿ ಆನೆಘಟ್ಟ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಬಿ.ಎಂ.ಶ್ರೀ. ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಮಾಣಿಕಬಾಯಿ ಕಾವ್ಯ ಪ್ರಶಸ್ತಿ, ಕಾವ್ಯಾನಂದ ಮುಂಬೈ ಹೊರನಾಡು ಪ್ರಶಸ್ತಿ, ಅಂಜೂರ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ’ ಲಭಿಸಿವೆ.  ...

READ MORE

Related Books