'ಚರಿತಾ’ ನಮ್ರತಾ ನಾಯಕ್ ಅವರ ಕವನಸಂಕಲನವಾಗಿದೆ. 'ಚರಿತಾ'ದಲ್ಲಿ ಏನಿದೆ? ಏನಿಲ್ಲ? ರಸಾಯನದ ಬುತ್ತಿ. ಇಲ್ಲಿ ಸಿಹಿ-ಸುಂದರ ಭಾವನೆಗಳು ಮೇಳೈಸಿವೆ. ಹೀಗೆಂದ ಒಡನೆಯೇ ಇಲ್ಲಿ ಕಹಿ ಇಲ್ಲ, ಕಲ್ಲು-ಮುಳ್ಳು ಇಲ್ಲ, ಬಿರು ಬೇಸಿಗೆಯೂ ಇಲ್ಲ ಎಂದಿಲ್ಲ. ಇವೆಲ್ಲವನ್ನೂ ಒಳಗೊಂಡ ಒಂದು 'ಕೊಲಾಜ್' ಆಗಿದೆ 'ಚರಿತಾ'. ಇಲ್ಲಿ ಪ್ರೀತಿ-ಪ್ರೇಮದ ಮಧುರ ಭಾವನೆಗಳು ಮಿಡಿದಿವೆ. ಮನಃಪಟಲದಲ್ಲಿ ತೇಲಾಡಿವೆ. 'ಬರುವೆ ಏಕೆ ಕನಸಾಗಿ ನನ್ನ ನೆನಪೆ' - ಕನಸು ಸಹ ಅದೆಷ್ಟು ಮಧುರ! 'ಉಸಿರುಸಿರಿಗೆ ಉಸಿರ ಸೇರಿಸಿ ನಿನ್ನಲೆ ಬೆರತು ನನ್ನನು ಮರೆತೆ ಇಂಥ ಹತ್ತಾರು ಕವನಗಳು ಪದಲಾಲಿತ್ಯದಿಂದ ಸೊಬಗು ಪಡೆದಿವೆ. ಎಲ್ಲ ಕವಿಗಳ ಕವನ ಸಂಕಲನಗಳಲ್ಲಿ ಇಂಥ ಪ್ರೇಮ ಕವಿತೆಗಳು, ಪ್ರಣಯಗೀತೆಗಳು ಉಲಿಯುತ್ತವೆ, ನಲಿಯುತ್ತವೆ. ನಮ್ರತಾ ನಾಯಕ್ ಅವರ ಕವನ ಸಂಕಲನದಲ್ಲಿಯೂ ಈ ಕವಿತೆಗಳು ಹೆಚ್ಚಿನ ಭಾಗವನ್ನು ಆಕ್ರಮಿಸಿವೆ. 'ನನ್ನದೆನ್ನುವುದು ಏನೂ ಇಲ್ಲ' 'ಎನ್ನಿನಿಯ', 'ಇರುವೆ ನಾ ಬರಿ ನಿನ್ನಲಿ' - ಇಂಥ ಅನೇಕ ಕವಿತೆಗಳನ್ನು ಚರಿತಾ'ದಿಂದ ಉದಾಹರಿಸಬಹುದು. ಈ ಕವನಸಂಕಲನ ಪ್ರೀತಿ-ಪ್ರಣಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅನೇಕ ಸಂದರ್ಭಗಳಲ್ಲಿ ತನ್ನ ಒಳತೋಟಿಯ ನೋವಿಗೆ ನಮ್ರತಾ ಹೀಗೆ ಸ್ಪಂದಿಸಿದ್ದಾರೆ.
ನಮ್ರತಾ ನಾಯಕ್ ಅವರು ಬೆಂಗಳೂರಿನವರು. ಕಳೆದ ಹದಿನೈದು ವರ್ಷದಿಂದ IT professional. Senior Project Manager ಆಗಿ Kyndryl (IBM)ಎನ್ನುವ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕವಿತೆ, ಕಥೆಗಳನ್ನು ಬರೆಯುವ ಹವ್ಯಾಸವನ್ನು ಹೊಂದಿದ್ದಾರೆ. ಕೃತಿಗಳು: ಚರಿತಾ (ಕವನಸಂಕಲನ) ...
READ MORE