ಕವಿ ಅನಂತ ಅವರ ಕವನ ಸಂಕಲನ-ಮೂರನೆಯವಳು. ಲೇಖಕಿ ಎಂ.ಆರ್, ಕಮಲ ಅವರು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ಬಹುತೇಕ ಕವನಗಳು ಸ್ತ್ರೀಕೇಂದ್ರಿತವಾಗಿವೆ. ಹೆಣ್ಣಿನ ಅಂತರಂಗವನ್ನು ಹೊಕ್ಕು, ಅವಳ ಸೂಕ್ಷ್ಮ-ಸಂಕೀರ್ಣ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅಭಿವ್ಯಕ್ತಿಸುವ ರೀತಿಯಲ್ಲಿ ಇಲ್ಲಿಯ ಕವಿತೆಗಳಿವೆ. ಇಡೀ ಜಗತ್ತನ್ನು ನಡೆಸುವ ಮಾತೃ ಶಕ್ತಿಯೊಂದು ತನ್ನನ್ನು ಕೈ ಹಿಡಿದು ಪೊರೆಯುತ್ತಿದೆ. ಎನ್ನುವ ನೆಲೆಯಿಂದಲೇ ಇಲ್ಲಿಯ ಕವಿತೆಗಳು ರೂಪುಗೊಂಡಿವೆ. ಇಲ್ಲಿಯ ಪ್ರೇಮ ಕವಿತೆಗಳಿಗೆ ಬಳಸಿರುವ ಭಾಷೆರಮ್ಯ ಶೈಲಿಯಲ್ಲಿದ್ದಂತೆ ತೋರುತ್ತದೆ. ಜಾನಪದ ಶೈಲಿ, ಕಥನ ಕವನದ ಧಾಟಿಯೂ ಕೆಲವು ಕವಿತೆಗಳಲ್ಲಿ ಕಾಣುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ...
READ MORE