ನಿರುತ್ತರ

Author : ಸಂಗೀತಾ ರವಿರಾಜ್

Pages 116

₹ 100.00




Year of Publication: 2020
Published by: ದೀಪ್ತಿ ಬುಕ್ ಹೌಸ್
Address: #285, ಎಫ್- 6, 5ನೇ ವೆಸ್ಟ್ ಕ್ರಾಸ್, ಉತ್ತರಾಧಿಮಠ, ಮೈಸೂರು
Phone: 97316 41886

Synopsys

`ನಿರುತ್ತರ’ ಕೃತಿಯು ಸಂಗೀತಾ ರವಿರಾಜ್ ಅವರ ಕವನಸಂಕಲನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಬಗೆಬಗೆಯ ಬಗೆಯನರಳಿಸಿ ಸರಿವ ಕಾಲವನ್ನು ಬರೆಗುಗಣ್ಣಿನಿಂದ ನೋಡುತ್ತಲೇ ಅದಕ್ಕನುಗುಣವಾಗಿ ಹೆಜ್ಜೆಹಾಕುತ್ತಾ, ಬುದ್ಧನ ಸಾವನ್ನು ಬದುಕಿನ ಪಾಠವೆಂದು ತಿಳಿಹೇಳುತ್ತಾ, ಆತ್ಮನಿವೇದನೆಯೆ ಬಾಳು ಇಲ್ಲವೆಂದಲ್ಲಿ ಬದುಕು ಹೇಗೆ ಆತ್ಮವಂಚನೆಯಾಗಬಲ್ಲುದು ಎಂಬುದನ್ನು ಸೂಕ್ಷ್ಮವಾಗಿ ತೆರೆದಿಡಬಲ್ಲರು. ಬದುಕಿನ ಆಕಸ್ಮಿಕ ತಿರುವುಗಳನ್ನು ಒಪ್ಪಿಕೊಳ್ಳದಿದ್ದರೆ ಬದುಕಿನಲ್ಲೇನು ಆಕರ್ಷಣೆಯಿದೆ? ಬದುಕಿಗೇನು ಅರ್ಥವಿದೆ? ಅಂತ ದಾರ್ಶನಿಕವಾಗಿ ಕವಿತೆಯ ಒಳಹೊಕ್ಕು ನುಡಿಯಬಲ್ಲರು. ಜೇಡನ ಬಲೆಯನೇಯುವಿಕೆಯ ಕುಶಲಗಾರಿಕೆಯನ್ನು ಪ್ರತಿಮೆಯಾಗಿಸಿಕೊಂಡು, ನೇಯುವುದು ಹಾಗೂ ನೋಯುವುದು ಬದುಕಿನ ಪರಮಸತ್ಯವೆಂಬ ಕಟು ವಾಸ್ತವನ್ನು ನಮ್ಮ ಮುಂದೆ ಅನಾವರಣಗೊಳಿಸುತ್ತಲೇ ಬೆಳದಿಂಗಳ ಬೆಳಕಿನಲ್ಲಿ ಭಾವಗೀತೆ ಹೊಸೆಯಬಲ್ಲರು ಎಂದು ಸ್ಮಿತಾ ಅಮೃತರಾಜ್ ಅವರು ಇಲ್ಲಿ ಬರೆದಿದ್ದಾರೆ.

About the Author

ಸಂಗೀತಾ ರವಿರಾಜ್

ಕವಯಿತ್ರಿ ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಅವರು ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರೆ. ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿರುತ್ತಾರೆ. ಪ್ರಶಸ್ತಿ: ‘ಕಪ್ಪು ಹುಡುಗಿ” ಕೃತಿಗೆ 2018ರ ಕೊಡಗಿನ ಗೌರವ ಪ್ರಶಸ್ತಿ. ಕೃತಿಗಳು: ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ...

READ MORE

Related Books