ಕವಿ ಜಿ.ವಿ. ಕುಲಕರ್ಣಿ ಅವರ ಮೊದಲ ಸಂಕಲನ ’ಮಧುಸಂಚಯ’. ಈ ಸಂಕಲನದಲ್ಲಿ 60 ಕವಿತೆಗಳಿವೆ. ಕವಿ ಬೇಂದ್ರೆಯವರ ಸೂಚನೆಯಂತೆ ’ಜೀವಿ’ಯಾದ ಕವಿಗಳ ವೈವಿಧ್ಯಮಯ ಕವಿತೆಗಳು ಈ ಸಂಕಲನದಲ್ಲಿವೆ. ಕವಿ ವಿ.ಕೃ. ಗೋಕಾಕರ ಮುನ್ನುಡಿಯಿದೆ. ಕೃತಜ್ಞತೆ ಎಂಬ ಸುದೀರ್ಘ ಪದ್ಯದಲ್ಲಿ ಜೀವಿಯವರು ತಮಗೆ ಪ್ರೇರಣೆ ನೀಡಿದ-ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಲು ಕಾರಣರಾದವರಿಗೆ ಕವಿತೆಯ ಮೂಲ ಕೃತಜ್ಞತೆ ಸಲ್ಲಿಸಿದ್ದಾರೆ.
ಮುನ್ನುಡಿಯಲ್ಲಿ ಗೋಕಾಕರು ಈ ಸಂಕಲನದ ಕವಿತೆಗಳನ್ನು ಕುರಿತು ’ಕಣ್ಣು ತೆರೆದಾಗ ಕಾವ್ಯ ಹುಟ್ಟುತ್ತದೆ. ಈ ಉನ್ಮೀಲನದ ವಿಧಾನ ಈಗ ಜೀವಿಯವರಲ್ಲಿ ಪ್ರಾರಂಭವಾಗಿದೆಯೆನ್ನಲು ಅಡ್ಡಿಯಿಲ್ಲ. ಅವರ ’ಯಾತ್ರಿಕ’ ಎಂಬ ಕವನವನ್ನು ಈ ದೃಷ್ಟಿಯಿಂದ ನಾನು ಮೆಚ್ಚಿದ್ದೇನೆ.
ಬಾಳ ಕಡಲಿನ ನೀರಿನಲ್ಲಿಯೆ
ಹೇಗೊ ಬಿದ್ದಿಹೆ ತಿಳಿಯದು.
ಬಿದ್ದ ತಪ್ಪಿಗೆ ಈಸಬೇಕು
ಮತ್ತೆ ದಡವದು ದೊರೆಯು’
ಎಂಬ ಸಾಲುಗಳಲ್ಲಿ ಒಂದು ವಿಶೇಷ ಜೀವನದೃಷ್ಟಿ ಅಭಿವ್ಯಕ್ತವಾಗಿದೆ. ಯಾವುದೋ ಒಂದು ಗೂಢ, ಆಜ್ಞೇಯ ಘಟನೆಯ ಅರಿವು, ಅದರ ಮೂಲ ಏನೇ ಇರಲಿ,-ಸಂಭವಿಸಿದ ಮೇಲೆ ಅದನ್ನು ಎದುರಿಸಬೇಕೆಂಬ ಹುಮ್ಮಸ್ಸು- ಇವೆರಡೂ ಈ ಶ್ಲೋಕದಲ್ಲಿ-ಇಡಿ ಕವಿತೆಯಲ್ಲಿ-ಸುಂದರವಾಗಿ ಕಾಣಿಸಿಕೊಂಡಿದೆ. ’ದೇವನಾರು?’ ಎಂಬ ಕವಿತೆಯಲ್ಲಿ ’ಮೈಮರೆತವ ಮನುಜನಾದ’ನೆಂದು ಜೀವಿ ಹೇಳುತ್ತಾರೆ. ಗಾಂಧೀಜಿ ಎಂಬ ಕವಿತೆಯಲ್ಲಿ ಇಂತಹದೇ ಭಾವ ಹೃದಯಸ್ಪರ್ಶಿಯಾಗಿ ವ್ಯಕ್ತವಾಗಿದೆ.
ಎಂದು ಬರೆದಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್' ಪಡೆದೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿಗಳನ್ನು ಗಳಿಸಿದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿ ಮುಂಬೈಗೆ ತೆರಳಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ, ಪಿಎಚ್.ಡಿ ಪಡೆದರು. ಬೊಂಬಾಯಿ ನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ...
READ MORE