‘ಗುಟ್ಟು ಬಚ್ಚಿಡಲು ಬರುವುದಿಲ್ಲ’ ಕೃತಿಯು ಚೇತನಾ ತೀರ್ಥಹಳ್ಳಿಯವರ ಕವನ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಕವಿತೆ, ಕಾವ್ಯ ನೀಡುವ ಅನುಭೂತಿ ಅನೇಕ ಬಾರಿ ತೀರಾ ವಿಶಿಷ್ಟವಾದದ್ದು. ಯಾವ ಚಿತ್ರ, ಕಲ್ಪನೆ, ಪ್ರತಿಮೆ, ಶಬ್ದ ನನ್ನಲ್ಲಿ, ನನ್ನ ಮನೋಭಿತ್ತಿಯಲ್ಲಿ, ಸುಪ್ತ ಚಿತ್ತ ಭಿತ್ತಿಯಲ್ಲಿ ಥಟ್ಟನೆ ಮೂಡಿಸಿಬಿಡುವುದೋ, ಆ ಭಾವವೇನಿದೆ, ಅದನ್ನು ‘ಕವಿಭಾವ ಪ್ರತಿಮಾ ಪುನರ್-ಸೃಷ್ಟಿ’ ಎಂದು ಕರೆಯುವುದಾದರೆ - ಅದು ಎಲ್ಲರಿಗೂ ಒಂದೇ ಆಗಿರಬೇಕಾಗಿಲ್ಲ. ಇದಕ್ಕೆ ಕಾರಣ ಮೇಲೆ ನಾನು ವಿವರಿಸಿದ ನನ್ನ ವ್ಯಕ್ತಿ ವಿಶಿಷ್ಟ ಛಂದಸ್ಸು, ನನ್ನ ಅನುವಾದದ ಭಾಷೆ ಮತ್ತು ಕವಿಯ ವ್ಯಕ್ತಿ ವಿಶಿಷ್ಟ ಛಂದಸ್ಸು ಮತ್ತು ಸಂವಹನದ ಭಾಷೆ ಒಂದೇ ಬಿಂದುವಿನಲ್ಲಿ ಸಂಧಿಸಬೇಕಾದ ನಿಯಮವೇನಿಲ್ಲ ಎನ್ನುವುದೇ. ವಿಷಾದದ ಋತುಮಾನ ಮತ್ತೆ ಬಂದಿದೆ… ಕವಿಗಳ ಸೆಮಿನಾರು ನಡೆಯುತ್ತಿದೆ, ಯಾರದೋ ಕರುಳ ನೋವನ್ನ ಮೆಚ್ಚುತ್ತಿದ್ದಾರೆ ಅದರ ಸಾಲು ಸಾಲು ಹಿಂಡಿ ಸವಿಯುತ್ತಿದ್ದಾರೆ(ವಿಷಾದದ ಋತುಮಾನ) ಇಲ್ಲಿಯೇ ಈ ಕವನಗಳು ವ್ಯಕ್ತಿತ್ವದ ‘ನಿಜ’ದ ಶೋಧವನ್ನೂ ನಡೆಸುತ್ತಿವೆ. ಇದು ಆತ್ಮರತಿಯಾಗದೆ, ಕನ್ನಡಿಯ ಪ್ರತಿಬಿಂಬವನ್ನೂ ಅನುಮಾನಿಸುವ ತೀವ್ರತೆಯಲ್ಲಿ ಸಾಗುವ ಅಂತಃಶ್ಶೋಧ. ನಾನಂಬಿಕೊಂಡ ನನ್ನ ಸುಳ್ಳುಗಳು ನಾನಪ್ಪಿಕೊಂಡ ನನ್ನ ಶತ್ರುಗಳು ನಾ ಕೊಂದ ನನ್ನ ಇಷ್ಟಗಳು ನನ್ನದಲ್ಲದ ನನ್ನ ಕಥೆಗಳು....(ತಪ್ಪೊಪ್ಪಿಗೆ) ನಂಬಿಕೆ ಮತ್ತು ವಾಸ್ತವ; ಸುಳ್ಳು, ನಾಟಕ ಮತ್ತು ಆತ್ಮಸಾಕ್ಷಿಯ ನಡುವಿನ ಸಂಘರ್ಷದ ಸುತ್ತ ಕೆಲವು ಕವನಗಳಿದ್ದು ಇವು ಭಾಷೆ-ಭಾವದ ನಡುವಿನ ಇತಿಮಿತಿಯನ್ನೂ ಶಕ್ತಿಯನ್ನೂ ಕವಿಗೆ ಅತ್ಯಂತ ನಿಖರವಾಗಿ ತೋರಿಸಿಕೊಡಬಲ್ಲ ಸಾಧ್ಯತೆಯಿರುವುದರಿಂದಲೇ ಮುಖ್ಯವಾಗುತ್ತವೆ.
ಹುಟ್ಟೂರು ತೀರ್ಥಹಳ್ಳಿ. ಮೂಲ ಹೆಸರು ಗಾಯತ್ರಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಮೂವತ್ತು ವರ್ಷಗಳಿಂದ ಗದ್ಯ - ಪದ್ಯ ರಚನೆಯಲ್ಲಿ ತೊಡಗಿಕೊಂಡಿದ್ದು, ಸ್ವತಂತ್ರ ಕೃತಿ, ಅನುವಾದ, ಸಂಪಾದನೆ ಸೇರಿದಂತೆ 15 ಪುಸ್ತಕಗಳು ಪ್ರಕಟವಾಗಿವೆ. ‘ಉಫೀಟ್’ – ಉದಯೋನ್ಮುಖ ಬರಹಗಾರರ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ಪ್ರಕಟಗೊಂಡ ಮೊದಲ ಪದ್ಯ ಸಂಕಲನ. ‘ಭಾಮಿನಿ ಷಟ್ಪದಿ’ ಅಂಕಣ ಸಂಕಲನವಾಗಿದ್ದು, ಎರಡು ಮುದ್ರಣ ಕಂಡಿದೆ. ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಮತ್ತು ‘ಸೂರ್ಯನೆದೆಯ ನೀರಬೀಜ’ ಮುದ್ರಿತ ಪದ್ಯ ಸಂಕಲನಗಳು; ‘ಕಣೇ ಲಾ ಪದ್ಯಗಳು’ ಇ - ಬುಕ್ ಸಂಕಲನವಾಗಿ ಪ್ರಕಟವಾಗಿದೆ. ‘ಬಿಸಿಲ ಚೂರಿನ ಬೆನ್ನು’, ‘ಅಧ್ಯಾತ್ಮ ಡೈರಿ’ ಬ್ಲಾಗ್ ಮತ್ತು ವೆಬ್‍ಸೈಟ್‍ಗಳಲ್ಲಿ ಪ್ರಕಟಗೊಂಡ ...
READ MORE