ಸಾಹಿತಿ ನಾಗರಾಜ ಹೆಗಡೆ ಅಪಗಾಲ ಹಾಗೂ ಪ್ರಶಾಂಶ ಮೂಡ್ಲಹೆಗಡೆಮನೆ ಸಂಪಾದಕತ್ವದಲ್ಲಿ ಮೂಡಿಬಂದ ಹೊನ್ನಾವರದ ಕವಿತೆಗಳು ಕವನಗಳ ಸಂಕಲನವಾಗಿದೆ. ಉತ್ತರ ಕನ್ನಡದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಈ ಕೃತಿಗೆ ಅಭಿನಂದನಾ ನುಡಿಗಳನ್ನು ಬರೆದಿದ್ದು, ‘ನಮ್ಮ ರಾಜ್ಯದಲ್ಲೇ ಇದು ವಿನೂತನವಾದ ಪ್ರಯತ್ನ. ಹೊಸಗನ್ನಡ ಕಾವ್ಯದ ಒಂದು ಶತಮಾನದ ಮೂರು ತಲೆಮಾರಿನ ಕವಿಗಳನ್ನು ಪ್ರತಿನಿಧಿಸುತ್ತಿರುವ ಈ ಸಂಕಲನಕ್ಕೆ ಐತಿಹಾಸಿಕವಾಗಿ ಮಹತ್ವದ ಸ್ಥಾನವಿದೆ. ತಾಲ್ಲೂಕಿನ ಕಾವ್ಯ ಪರಂಪರೆಯ ಅಭ್ಯಾಸಿಗಳಿಗೆ, ಸಂಶೋಧಕರಿಗೆ ಇದು ದಿಕ್ಸೂಚಿಯಾಗಬಲ್ಲದು’ ಎಂದಿದ್ದಾರೆ.
ಹೊನ್ನಾವರದ 65 ಕವಿಗಳು ಬರೆದಿರುವ ವಿಭಿನ್ನ ಆಯಾಮಗಳ ಕವನಗಳನ್ನು ಜೊತೆಗೆ ಸೇರಿಸಿ, ಈ ಸಂಕಲನವನ್ನು ಸಂಪಾದಿಸಲಾಗಿದ್ದು, ಕೃತಿಯನ್ನು ಉಚಿತವಾಗಿ ನೀಡಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಅಪಗರದಲ್ಲಿ 27-05-1971ರಂದು ಜನಿಸಿದ ಇವರು ಹೊನ್ನಾವರ ಹಾಗೂ ಧಾರವಾಡದಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನ, ಕೃಷಿ, ಸಮುದಾಯ ಶಿಕ್ಷಣ, ಪರಿಸರ ಸಂರಕ್ಷಣೆ, ಸಂಗೀತಗಳಲ್ಲಿ ಸಮಾನ ಆಸಕ್ತಿ. ಕಣ್ಣಂಚಿನ ಕಡಲು ಪ್ರಕಟಿತ ಕವನ ಸಂಕಲನ. ಸಹಸ್ರ ಶೀರ್ಷ, ಅಭಿಯಾನ, ರಾಗಾನುರಾಗ, ಗಣನಾಯಕ, ದಾಂಪತ್ಯ ದೀವಿಗೆ, ಸಮಾಜ ಸಂಸ್ಕೃತಿ -ಸಂಪಾದಿತ ಕೃತಿಗಳು. ಹಲವು ಪತ್ರಿಕೆಗಳಲ್ಲಿಇವರ ಕವನ, ಲೇಖನಗಳು ಪ್ರಕಟಗೊಂಡಿವೆ. ...
READ MORE