ನಾನು ಒಂದು ದಿನ ಊಟ ಬಿಡುತ್ತೇನೆ, ಆದರೆ ಕವಿತೆ ಬರೆಯುವುದನ್ನು ಮರೆಯುವುದಿಲ್ಲ ಎಲ್ಲಾ ನಕ್ಷತ್ರಗಳನ್ನು ಅಕ್ಷರವಾಗಿಸುವೆ, ಆದರೆ ಅನುಮತಿಸಿ ಮಿನುಗಿಸುವ ದೇವರು ಇನ್ನೂ ಪ್ರತ್ಯಕ್ಷವಾಗಿಲ್ಲ. ಎನ್ನುವ ಕವಿತೆಯಿಂದ ಆರಂಭವಾಗುವ ಕಟ್ಟಿಮನಿಯವರ ಕವನ ಸಂಕಲನದಲ್ಲಿ 72 ಕವನಗಳು ಮುದ್ರಿಸಲ್ಪಟ್ಟಿವೆ. ಮೊದಲ ಕವನವೇ ಕವನದೆಡೆಗಿನ ಕವಿಯ ಅದಮ್ಯ ಪ್ರೀತಿಯನ್ನು ತೋರಿಸುತ್ತದೆ. ಹಲವು ಕವಿತೆಗಳನ್ನು ಕನ್ನಡದಲ್ಲಿ ನಾವು ಓದಿದ್ದೇವೆ, ಆದರೆ ಮೌಲಿಕ ಅಂಶಗಳನ್ನೊಳಗೊಂಡ ಕವಿತೆಗಳ ಕೊರತೆ ಕನ್ನಡದಲ್ಲಿ ಎದ್ದು ಕಾಣುತ್ತಿತ್ತು. ಆದರೆ ಕಟ್ಟೀಮನಿಯವರ ಗುಲಬಾಕ್ಷಿ ಹೂ ಮೌಲಿಕ ಕವನಗಳ ಬರವನ್ನು ನೀಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಸಿದ್ಧಾರೂಢ ಕಟ್ಟಿಮನಿ ಅವರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ತಂದೆ- ಶ್ರೀ ಗುರುನಾಥ ಸಿ ಕಟ್ಟಿಮನಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ- ಶ್ರೀಮತಿ ಶಕುಂತಲಾ ಗು ಕಟ್ಟಿಮನಿ. ಸಿದ್ಧಾರೂಢ ಕಟ್ಟಿಮನಿ ಅವರು ಇಂಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಫ್ರೌಢ ಶಿಕ್ಷಣ ಮುಗಿಸಿದರು. ಮ್ಯಾಟ್ರಿಕ್ ನಂತರ ಸಾಹಿತ್ಯ ಕೃಷಿ ಆರಂಭವಾಗಿತು. ಪದವಿ ಪೂರ್ವ ಶಿಕ್ಷಣ(ವಿಜ್ಞಾನ), ಸಿಂದಗಿಯಲ್ಲಿ ಪದವಿ(ವಿಜ್ಞಾನ)ಪೂರ್ಣಗೊಳಿಸಿದರು. ಆನಂತರ ಪ್ರೌಢ ಶಿಕ್ಷಕ ತರಬೇತಿ ಪಡೆದು ಪ್ರೌಢ ಶಿಕ್ಷಕ ಸೇವೆ ಆರಂಭಿಸಿದರು. ಪ್ರಥಮ ದರ್ಜೆ ಸಹಾಯಕರಾಗಿ ಹುದ್ದೆಗೆ ನೇಮಕವಾದರು. ಬಾಗಲಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಬೋಧಕೇತರ ವೃತ್ತಿ ಪ್ರಾರಂಭಿಸಿದರು. ...
READ MORE