ಕನಸಿನ ದನಿ

Author : ಅಜಿತ್ ಹರೀಶಿ

Pages 132

₹ 150.00




Year of Publication: 2021
Published by: ನೇಕಾರ ಪ್ರಕಾಶನ
Address: #409, 38th ’ಎ’ ಕ್ರಾಸ್, ಜಯನಗರ, 9 ನೇ ಬ್ಲಾಕ್ ಬೆಂಗಳೂರು
Phone: 9900562323

Synopsys

ಕವಿ, ಲೇಖಕ ಡಾ. ಅಜಿತ್ ಹರೀಶಿ ಅವರ ಕವನ ಸಂಕಲನ- ಕನಸಿನ ದನಿ. ಒಟ್ಟು 47 ಕವಿತೆಗಳಿವೆ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಸರ್ಫ್ರಾಜ್ ಚಂದ್ರಗುತ್ತಿ ಅವರು ಕವಿತೆಗಳ ಪೈಕಿ  ಕೆಲವು ಮೊದಲ ಓದಿಗೆ ತೆರೆದುಕೊಂಡರೆ ಮತ್ತೆ ಕೆಲವು ಓದುಗರನ್ನು ದಂಗುಬಡಿಸುತ್ತವೆ. ಹಲವು ಅರ್ಥದ ನೆಲೆಗಳು ಗೋಚರಿಸುತ್ತವೆ. ಸಾಮಾನ್ಯ ಓದುಗರಿಗೆ ಸವಾಲಾಗುತ್ತವೆ. ಸಂಕಲನದ ಮೊದಲ ಕವಿತೆ 'ತಿಮಿರ ' -ಅಜ್ಜಿಯೊಬ್ಬಳ ಕಥೆಯಿಂದ ಮೂಡುವ ಭಯ ಸ್ಥಾಯಿಭಾವವಾಗುತ್ತದೆ ಹಾಗೂ ಕವಿತೆಗೆ ರಾಜಕೀಯ ಆಯಾಮ ಒದಗಿಬಂದು ವಿಭಿನ್ನ ಅರ್ಥಗಳ ನೆಲೆಗಳು ಹುಟ್ಟಿಕೊಳ್ಳುತ್ತವೆ. "ಹಗ್ಗ ಹಾವಾಗಿ ಹತನಾಗುವ ಉಪಮೆ, ಅರಿವ ಹಣತೆ ಆರದಿರೆ ನಿತ್ಯ ಹುಣ್ಣಿಮೆ" ಎನ್ನುವಲ್ಲಿ ಕವಿಯ ವೈಚಾರಿಕ ನಿಲುವು ತೆರೆದುಕೊಳ್ಳುತ್ತದೆ. ಕನಸಿನ ಕನವರಿಕೆಯೊ ನೋಟದ ಭ್ರಮೆಯೋ ಅನ್ನಿಸುವ ಚಿತ್ರಗಳು 'ಕನಸಿನ ದನಿ'ಯಲ್ಲಿವೆ. ಹಲವು ಸಲ ಬದುಕಲ್ಲಿ ಅರ್ಥ ಹುಡುಕುವುದೇ ವ್ಯರ್ಥ ಎನ್ನುವ ಅನುಭಾವಿಗಳ ಮಾತಿನ ರೂಪಕದಂತಿವೆ ಇಲ್ಲಿನ ಕೆಲವು ರಚನೆಗಳು. ಸಹಜ ಬದುಕು ಮತ್ತು ಯಾಂತ್ರಿಕ ಬದುಕಿನೊಳಗೆ ಹುಲಿಯ ಪ್ರವೇಶವಾಗುತ್ತದೆ. ಬದುಕಿನ ಸಹಜತೆ ತೊಲಗಿ ಕ್ರೌರ್ಯ ಪ್ರವೇಶ ಪಡೆಯುತ್ತದೆ. ಕನಸಿನೊಳಗಿನ ಬದುಕಲ್ಲ, ಬದುಕೇ ಒಂದು ಕನಸಾಗಿಬಿಡುವ ವೈಚಿತ್ರ್ಯವನ್ನು 'ಕನಸಿನ ದನಿ' ಕವಿತೆ ಧ್ವನಿಸುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

About the Author

ಅಜಿತ್ ಹರೀಶಿ
(24 August 1978)

ಲೇಖಕ ಡಾ. ಅಜಿತ್  ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ  ಇವರು, ಆಕ್ಯುಪಂಕ್ಚರ್ ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿಯೂ ಪರಿಣಿತರು.  ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು.  ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು.  ಕಥಾಭರಣ ಸಂಪಾದಿತ ಕೃತಿಯಾಗಿದೆ. ಆರೋಗ್ಯದ ಅರಿವು ...

READ MORE

Related Books