ಹಿರಿಯ ಲೇಖಕ ಡಿ.ಎಸ್ ರಾಮಸ್ವಾಮಿ ಅವರ ಕವನ ಸಂಕಲನ-’ಮೀನು ಬೇಟೆಗೆ ನಿಂತ ದೋಣಿಸಾಲು’. ಇಲ್ಲಿ ಅಂತರಂಗ ಹಾಗೂ ಬಹಿರಂಗದ ಮರೆತ ಮಾತುಗಳೆಲ್ಲವೂ ಅನುಭವದ ಮೂಸೆಯಲ್ಲಿ ಹಾದು ಕವಿತೆಯಾಗುವತ್ತ ಸಾಗಿವೆ. ಒಳಗೆ ಅಡಗಿದ ಕಾಡುವ ಮಾತುಗಳೆಲ್ಲ ಹೊರಬಂದರೆ ಕವಿತೆಗಳಾಗುತ್ತವೆಯೇ? ಈ ಪ್ರಶ್ನೆಗಳನ್ನು ರಾಮಸ್ವಾಮಿ ತಮ್ಮ ಕವಿತೆಗಳಲ್ಲಿ ನಾಜೂಕಾಗಿ ಬಿಡಿಸುವ ಯತ್ನ ಮಾಡುತ್ತಾರೆ. ಕಾಲ ಬದಲಾಗುತ್ತಿದ್ದರೂ ಬದಲಾಗದೆ ಉಳಿದ ತಂದೆ ಮತ್ತು ಮಗನ ಸಂಬಂಧದಲ್ಲಿನ ಅಂತರವನ್ನು ಈಗಾಗಲೇ ಇರುವ ಪ್ರಸಿದ್ಧ ಉದಾಹರಣೆಗಳ ಮೂಲಕ ಕಟ್ಟುವ ಕ್ರಮ ಗಮನ ಸೆಳೆಯುತ್ತದೆ. ವಿಶೇಷವಾಗಿ ತಮ್ಮ ತಂದೆಯನ್ನು ಕುರಿತಾಗಿ ಬರೆದ ಕವಿತೆಗಳು ಓದುಗರನ್ನು ಕಾಡುತ್ತವೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ 1965 ಮೇ 20ರಂದು ಶಿಕ್ಷಕ ಡಿ. ಶ್ರೀನಿವಾಸರಾವ್ ಮತ್ತು ಗಿರಿಜಮ್ಮ ದಂಪತಿಗಳ ಮೊದಲ ಮಗನಾಗಿ ಜನಿಸಿದರು. ತರೀಕೆರೆ, ಭದ್ರಾವತಿ, ಶಿವಮೊಗ್ಗೆಗಳಲ್ಲಿ ವಿದ್ಯಾಭ್ಯಾಸ, ವಾಣಿಜ್ಯದಲ್ಲಿ ಪದವಿ, ಕನ್ನಡ ಎಂಎ, ವಿಮೆ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲಮೋ, ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮದಲ್ಲಿ ಆಡಳಿತಾಧಿಕಾರಿಯಾಗಿದ್ದಾರೆ. 1994ರಿಂದ ಅರಸೀಕೆರೆ ನಿವಾಸಿ. 'ಮರೆತ ಮಾತು' (2002) (ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಡಿ.ಸಿ.ಅನಂತಸ್ವಾಮಿ ಕಾವ್ಯ ಪ್ರಶಸ್ತಿ ಪಡೆದ ಕೃತಿ), 'ಉಳಿದ ಪ್ರತಿಮೆಗಳು (2007) (ಹಸ್ತಪ್ರತಿಗೆ ಕನ್ನಡ ಕಾವ್ಯ ಸಂದರ್ಭದ ಪ್ರತಿಷ್ಠಿತ ...
READ MORE