‘ತಂಬೂರಿ’ ಗುರುನಾಥ ಬೋರಗಿ ಅವರ ಕವನ ಸಂಕಲನ. ಓದಿಗಿಂತ ಅನುಭವ ದೊಡ್ಡದು. ಅಂತಹ ಅನುಭಾವಿಗಳ ಕವಿತೆಗಳು ‘ತಂಬೂರಿ’ಯಲ್ಲಿ ಮಿಳಿತಗೊಂಡಿವೆ. ತಮ್ಮ ಅಜ್ಜ ಭೀಮಾಶಂಕರ ಮಹಾರಾಜರ ಅಧ್ಯಾತ್ಮಿಕ ಗರಡಿಯಲ್ಲಿ ತತ್ವ ರಸಾಯನ ಸವಿದು ಬೆಳೆದ ಲೇಖಕರು ತಂಬೂರಿಯ ಮೂಲಕ ತತ್ವ ರಸಾಯನವನ್ನೇ ಉಣಬಡಿಸಿದ್ದಾರೆ. ಸಂಕಲನದ ಪ್ರತಿ ಕವಿತೆಯೂ ಸದಾ ಗುನುಗುನಿಸುವಂತಿವೆ.
ಗುರುನಾಥ ಬೋರಗಿ- ಹೆಸರಿನಿಂದ ಪರಿಚಿತರಾದ ಗುರುನಾಥ ಎಂ.ಬಡಿಗೇರ ಹುಟ್ಟಿದ್ದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿ ಗ್ರಾಮದಲ್ಲಿ. ತಂದೆ ಮಹಾರುದ್ರಪ್ಪ. ತಾಯಿ ರಮಾಬಾಯಿ. ಓದಿದ್ದು ಎಸ್.ಎಸ್.ಎಲ್.ಸಿ. ಮಾತ್ರ. ಭಕ್ತಿಗೀತೆ, ಜನಪದಗೀತೆ, ಭಾವಗೀತೆ, ಸಿನಿಮಾಗೀತೆ, ಕಗ್ಗ, ಚುಟುಕು, ಹಾಯ್ಕು , ನವ್ಯಕವಿತೆ ಹೀಗೆ ಎಲ್ಲ ಪ್ರಕಾರದ ಸಾಹಿತ್ಯರಚನೆ ಮಾಡಿದ್ದು, ಅವರ ಮೊದಲ ಪುಸ್ತಕ 'ತತ್ತಿಗರ್ಭದ ಹಳದಿ'. ನಂತರ 'ತಂಬೂರಿ' ಕವನ ಸಂಕಲನ ಪ್ರಕಟವಾಗಿದೆ. ಕೆಲವು ಕನ್ನಡ ಸಿನೆಮಾಗಳಿಗೂ ಹಾಡು ಬರೆದಿದ್ದಾರೆ. ಹಲವು ಪತ್ರಿಕೆಗಳಲ್ಲಿ ಮುಖಪುಟ ಅಕ್ಷರ ವಿನ್ಯಾಸಕರಾಗಿ, ಉಪಸಂಪಾದಕ/ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ...
READ MORE