‘ಅಪ್ಪನ ಮುತ್ತು’ ಡಾ. ಸರ್ವೇಶ್ ಬಿ. ಅವರ ಚೊಚ್ಚಲ ಕವನ ಸಂಕಲನ. ಈ ಕೃತಿಗೆ ಲೇಖಕ ಆನಂದ ಪಾಟೀಲ ಅವರು ಮುನ್ನುಡಿ ಬರೆದಿದ್ದು, ‘ಅಪ್ಪನೆದೆಯೊಳಗಿಂದ ಉಕ್ಕಿ ಹರಿದ ವಾತ್ಸಲ್ಯದ ಲಹರಿ, ಬಗೆ ಬಗೆ ಇದು ಅಮ್ಮ ಎನ್ನುವುದು ಕಣ್ಣೆದುರೆ ತೆರೆದುಕೊಂಡ ಕರುಣೆಯ ಕಡಲು, ಅಪ್ಪ ಎನ್ನುವುದು ಬಚ್ಚಿಟ್ಟ ಕಡಲು ಆ ಬಚ್ಚಿಟ್ಟ ಕಡಲು ಇಲ್ಲಿ ಅಕ್ಷರಗಳಾಗಿ, ಕಲ್ಪನೆಗಳಾಗಿ ಪದ-ಪದಗಳಾಗಿ ನಮ್ಮ ಮುಂದೆ ಸಾಕಾರವಾಗಿದೆ ಅದಕ್ಕೆ ಕಾವ್ಯವೇ ಆಗಬೇಕೆಂಬ ಹಮ್ಮಿಲ್ಲ, ವಿಮರ್ಶೆಯ ಹಂಗಿಲ್ಲ, ಅದು ಸಹಜ ಸುಂದರ ಒರತೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಸರ್ವೇಶ್ ಅವರು ಆದಿ ಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಬೆಳ್ಳೂರು ಕ್ರಾಸ್, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಅಪ್ಪನ ಮುತ್ತು’ ಅವರ ಪ್ರಥಮ ಪ್ರಕಟಿತ ಕವನ ಸಂಕಲನ. ...
READ MORE