ಲೇಖಕ ಡಾ.ಶಿವಾನಂದ ಎಸ್. ಬಿಳವಾರ ಅವರ ಕವನ ಸಂಕಲನ-ಅರಿಮನವೆ. ಒಟ್ಟು 38 ಕವಿತೆಗಳಿವೆ. ವ್ಯವಸ್ಥೆ, ಶೋಷಣೆ , ಅನಾದರ ಸಂದರ್ಭಗಳು, ದುರ್ಜನರು, ಕಳ್ಳ ಸುಳ್ಳರು, ಬಡಾಯಿಕೋರರು, ಪ್ರೀತಿ, ಸೈನಿಕ, ತಂದೆ ಹೀಗೆ ಹಲವಾರು ವಿಷಯಗಳ ಕವಿತೆಗಳು ರಚನೆಗೊಂಡಿವೆ. ಕೆಲವು ಕವಿತೆಗಳು ತತ್ವಪದಗಳಾಗಿ ಮೂಡಿವೆ. ಕವಿಗಳ ಮೇಲೆ ತತ್ವಪದ ಸಾಹಿತ್ಯದ ಪ್ರಭಾವ ಇರುವುದನ್ನು ಗಮನಿಸಬಹುದು. ಅರಿಮನವೆ ಎಂಬ ಶೀರ್ಷಿಕೆಗೆ ಅನುಗುಣವಾಗಿ ನಿಜವಾದ ಬದುಕಿನ ಬಗ್ಗೆ ಅರಿವಿರಬೇಕು ಎಂಬ ವಿನಯವಂತಿಕೆ ಇದೆ.
ಕವಿ ಡಾ. ಶಿವಾನಂದ ಎಸ್. ಬಿಳವಾರ ಅವರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿಳವಾರ ಗ್ರಾಮದವರು. ಸ್ವಗ್ರಾಮದಲ್ಲಿ ಪ್ರೌಢ ಶಿಕ್ಷಣ, ಗುಲಬರ್ಗಾದಲ್ಲಿ ಬಿ. ಎ, ಪದವಿ, ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ. ಎ ಪದವಿ ನಂತರ ಇದೇ ವಿಶ್ವವಿದ್ಯಾಲಯದಿಂದ "ಗುಲಬರ್ಗಾ ಜಿಲ್ಲೆಯ ದಲಿತ-ಬಂಡಾಯ ಸಾಹಿತ್ಯ: ಒಂದು ಅಧ್ಯಯನ’, ವಿಷಯದಲ್ಲಿ ಪಿಎಚ್. ಡಿ ಪದವೀಧರರು. ಗುಲಬರ್ಗಾ ವಿಶ್ವವಿದ್ಯಾಲಯದ, ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದಿಂದ ಒಂದು ವರ್ಷದ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ವೀರಣ್ಣ ದಂಡೆಯವರ ಮಾರ್ಗದರ್ಶನದಲ್ಲಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ, ...
READ MORE