ಆರದ ಕೆಂಡಗಳು

Author : ಎಚ್.ಆರ್‌. ಚಲವಾದಿ

Pages 80

₹ 80.00




Year of Publication: 2019
Published by: ಅಭಿಜಿತ್‌ ಪ್ರಕಾಶನ
Address: ಮುಂಬೈ
Phone: 8983632755

Synopsys

ಮಾನವ ಸಮಾಜದ ಸಂಘರ್ಷವನ್ನು ಕವಿ ಎಚ್.ಆರ್. ಚಲವಾದಿ ಅವರು ತಮ್ಮ ಕವನಗಳಲ್ಲಿ ದಾಖಲಿಸಿದ್ದೇ-ಆರದ ಕೆಂಡಗಳು. ಅಸಮಾನತೆ, ಅನ್ಯಾಯ, ಶೋಷಣೆಗಳಿಂದ ಜಿಡ್ಡುಗಟ್ಟಿರುವ ವ್ಯವಸ್ಥೆ ಬದಲಾಗಬೇಕೆಂಬ ಜನಪರ ನಿಲುವು ಇಲ್ಲಿಯ ಕವಿತೆಗಳಲ್ಲಿವೆ.

ಶೋಷಿತ ಸಮುದಾಯದಿಂದ ಬಂದ ಈ ಕವಿ ತಮ್ಮ ಜನತೆಯನ್ನು ಜಾಗೃತಗೊಳಸಲು ಹೆಣಗಿದ ಮಹಾ ನಾಯಕ ಅಂಬೇಡ್ಕರ್‌ ಅವರ ಬದುಕು ಸಾಧನೆ ಕುರಿತೂ ಕವಿತೆ ರಚಿಸಿದ್ದಾರೆ. ಒಂದು ಕವಿತೆ ಹೀಗಿದೆ. ಯುಗ-ಯುಗಗಳಿಂದ ಕವಿದ ಕಗ್ಗತ್ತಲ ಕಲ್ಲುಬಂಡೆಯಲ್ಲೊಂದು ಜ್ವಾಲಾಮುಖಿಯ ಸ್ಪೋಟ ಜನ-ಜನಗಳನ್ನು ವಿಘಟಿಸುವ ಜಾತಿ ವ್ಯವಸ್ಥೆಯ ಛಾತಿಯಲ್ಲೊಂದು ವೈಚಾರಿಕ ಅಣು ಸ್ಫೋಟ

About the Author

ಎಚ್.ಆರ್‌. ಚಲವಾದಿ

ಎಚ್‌. ಆರ್‌. ಚಲವಾದಿ ಅವರು ಥಾಣೆ ಜಿಲ್ಲೆಯ ಅಂಬರನಾಥ ನಗರದ ಪರಿಷತ್ತಿನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು ಅವರ ಸಾಹಿತ್ಯ ಕೃಷಿಕತನ ಮಾತ್ರ ನಿವೃತ್ತಿ ಹೊಂದಿಲ್ಲ. ಕನ್ನಡ ಭಾಷಾ ಪಠ್ಯ ಪುಸ್ತಕಗಳ ಅನೇಕ ಸಮಿತಿ ಸತ್ರಗಳಲ್ಲಿ ಭಾಗವಹಿಸಿದ್ದಾರೆ. ಅವರು ಶಿಕ್ಷಕರ ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದು ಸಮಾಜ ಸಂಸ್ಥೆಯ ಅಧ್ಯಕ್ಷರಾಗಿ, ಶಿವಾಜಿ, ಪುಣೆ, ಶಾಹೂ, ಅಂಬೇಡ್ಕರ್‌ ಅವರ ಸಾಮಾಜಿಕ ಸಂಘಟನೆಯ ಸಲಹೆಗಾರರಾಗಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ‘ಆರದ ಕೆಂಡಗಳು’ ಕವನ ಸಂಕಲನ 2019ರಲ್ಲಿ ಪ್ರಕಟವಾಗಿದೆ. ...

READ MORE

Related Books