ಮನುಷ್ಯ ಆಧುನಿಕತೆಯ ಇಕ್ಕಳಕೆ ಸಿಲುಕಿ ಶ್ರಮಾಧಾರಿತ ಬದುಕಿನಿಂದ ದೂರವಾಗುತ್ತಿದ್ದಾನೆ ಎಂಬುದು ಸ್ಪಷ್ಟವಾಗಿ ಕಾಣಸಿಗುತ್ತದೆ. ಕೆಲವೇ ವರ್ಷಗಳ ಹಿಂದೆ ಪ್ರಮುಖವಾಗಿ ಬಳಕೆಯಾಗುತ್ತಿದ್ದ ಮನೆಯ ಅದೆಷ್ಟೋ ವಸ್ತುಗಳೀಗ ಆ್ಯಂಟಿಕ್ ಪೀಸ್ ನಂತೆ ಗೋಚರವಾಗುತ್ತವೆ. ಇದನ್ನೇ ಕಾವ್ಯದ ವಸ್ತುವನ್ನಾಗಿಸಿಕೊಂಡಿರುವ ಕವಯತ್ರಿಯವರು ಕಾಲಕ್ಕೆ ತಕ್ಕಂತೆ ಬದಲಾದ ಬದುಕನ್ನು ತಿಳಿಸುವ, ಎಚ್ಚರ ಪಡಿಸುವ ಧಾಟಿಯಲ್ಲಿ ಕವನಗಳನ್ನು ಬರೆದಿದ್ದಾರೆ. ಕವನ ಸಂಕಲನದ ಶೀರ್ಷಿಕೆ ಜೀನ್ಸ್ ತೊಟ್ಟ ದೇವರು ಈ ಕೃತಿಯಲ್ಲಿರುವ ಕನವಗಳ ರೂಪಕ ಎಂಬಂತಿದೆ.
ಕಾವ್ಯಾ ಕಡಮೆ ನಾಗರಕಟ್ಟೆ ಅವರ ‘ಜೀನ್ಸ್ ತೊಟ್ಟ ದೇವರು’ ಕವನ ಸಂಕಲನಕ್ಕೆ ಕಡಂಗೋಡ್ಲು ಕಾವ್ಯ ಪುರಸ್ಕಾರ ದೊರಕಿದೆ. 2018ನೇ ಪ್ರತಿಷ್ಠಿತ 'ದಿನಕರ ದೇಸಾಯಿ ಕಾವ್ಯ ಪ್ರಶಸ್ತಿಯೂ ಲಭಿಸಿದೆ.
ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. 1988ರಲ್ಲಿ ಜನನ. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ.ಎ ಪದವಿ. 2013ರಿಂದ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ‘ಧ್ಯಾನಕೆ ತಾರೀಖಿನ ಹಂಗಿಲ್ಲ’, ‘ಜೀನ್ಸ್ ತೊಟ್ಟ ದೇವರು’ ಪ್ರಕಟಿತ ಕವನ ಸಂಕಲನಗಳು. ‘ಮಾಕೋನ ಏಕಾಂತ’, ‘ತೊಟ್ಟು ಕ್ರಾಂತಿ’ ಕಥಾ ಸಂಕಲನಗಳು. ‘ಪುನರಪಿ’ ಕಾದಂಬರಿ. ‘ಆಟದೊಳಗಾಟ’ ಮತ್ತು ‘ಡೋರ್ ನಂಬರ್ ಎಂಟು’ ಹಾಗೂ ‘ಸಂಜೀವಿನಿ ಸ್ಟೋರ್ಸ್’ ನಾಟಕ ಸಂಕಲನಗಳು. ‘ದೂರ ದೇಶವೆಂಬ ಪಕ್ಕದ ಮನೆ’ ಪ್ರಬಂಧ ಸಂಕಲನ. ಇವರ ಪದ್ಯ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ...
READ MOREಜೀನ್ಸ್ ತೊಟ್ಟ ದೇವರು ಪುಸ್ತಕ ಬಿಡುಗಡೆ