‘ಅನಾಮಧೇಯ ಹೂ’ ಹನಿಗವನಗಳ ಗುಚ್ಛದಲ್ಲಿ ಸೃಷ್ಟಿಯ ಸೊಬಗು, ಹೂಗಳ ಅರಳುವಿಕೆಯ ಕಾಲಮಾನದ ಸೊಗಸು ಮತ್ತು ಸೊಬಗನ್ನು ಕವಿ ಇಲ್ಲಿ ಅನುಭಾವಿಸಿ ಪೋಣಿಸಿದ್ದಾರೆ. `ಓ ನನ್ನ ನಿರ್ಲಿಪ್ತ ಕಾರ್ತಿಕದ ಹಣತೆಗಳೇ ತೆರಳಿ ಒಮ್ಮೆ ಜೋಪಡಿಗೆ ತುಂಬು ಎಣ್ಣೆ ಜೊತೆಗೆ ಜೊತೆಗಾರ ಬತ್ತಿಯೂ ಇರಲಿ ಕೂಡಿರಲಿ ಮನೆ ಮಂದಿ ಬೆಳಗಲಿ ಕಾಲ ಅಳಿಯುವವರೆಗೂ' ಎಂಬ ಹನಿಗವನದ ಮೂಲಕ ಬಡತನವೆಂಬ ಬೆಂಕಿಯ ಕುಲುಮೆಯಲ್ಲಿ ಬೇಯುತ್ತಲೆ ಕತ್ತಲ ಜೋಪಡಿಯಲ್ಲಿರುವ ಅಸಹಾಯಕ ಮನೆಮಂದಿಗೆ ಬೆಳಕಾಗಲು ಕಾರ್ತಿಕದ ಹಣತೆಗಳಲ್ಲಿ ಮೊರೆ ಇಡುತ್ತಾರೆ. ದಿನನಿತ್ಯದ ಹಲವಾರು ಜಂಜಡಗಳ ಬದುಕು-ಬವಣೆಗಳಲ್ಲಿ ಕಳೆದುಹೋಗದ ಕವಿ ಮನಸ್ಸು ಮಾನವೀಯ ನಿಸರ್ಗಕ್ಕೂ ಋಣಿಯಾಗಿರುವುದನ್ನು ಮರೆಯುವುದಿಲ್ಲ.
ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು. 1983 ಜೂನ್ 01 ರಂದು ಜನನ ‘ಅಶೋಕವನ’ ಇವರ ಕಾವ್ಯನಾಮ. ತಂದೆ ಬಸವಂತಪ್ಪ, ತಾಯಿ ಮಲ್ಲವ್ವ. ಸಿಂಧನೂರಿನಲ್ಲಿ ಡಿ.ಇಡಿ ತರಬೇತಿ, ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಬಿ.ಎ. ಪದವಿ, ಹಾಗೂ ಎಂ.ಎ. ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ (ಕರ್ನಾಟಕ ರಾಜ್ಯ ಮುಕ್ತ ವಿ.ವಿ.) ಪಡೆದಿದ್ದಾರೆ. ಸೂಫಿ ಸಾಹಿತ್ಯ ಅಚ್ಚು ಮೆಚ್ಚು. 'ಒಂಟಿ ಹೊಸ್ತಿಲು' ಮೊದಲ ಕವನ ಸಂಕಲನ. ‘ಅನಾಮಧೇಯ ಹೂ’ ಅವರ ಮತ್ತೊಂದು ಹನಿಗವನ ಸಂಕಲನ. ...
READ MORE