'ತೋಚಿದ್ದೆ ಗೀಚಿದೆ' ಕವಿ ಆರ್.ಪಿ.ಮಂಜುನಾಥ ಬಿ.ಜಿ.ದಿನ್ನೆ ಅವರ ಕವನ ಸಂಕಲನ. ಭಾವ ಬತ್ತುವ ಮುನ್ನ ಎಂಬ ಉಪಶೀರ್ಷಿಕೆಯಡಿ ಕವನಗಳು ಮೈದೆಳೆದಿವೆ.ಪ್ರೀತಿ-ಪ್ರಣಯ, ಮಮತೆ, ದೇಶ-ಭಾಷೆ, ಸಂಸ್ಕೃತಿ, ಬಾಲ್ಯ, ಹರೆಯ, ಗೆಳೆತನ, ಹೊಸತನ, ಸಾಮಾಜಿಕ ಕಾಳಜಿ ,ಮಾನವೀಯ ಮೌಲ್ಯ ,ಜೀವನಪ್ರೀತಿ , ಬದ್ಧತೆ ಹೀಗೆ ವಯೋಮಾನಕ್ಕೆ ತಕ್ಕಂತೆ ಭಾವ ಮೂಲದಲ್ಲಿ ಹೊರಹೊಮ್ಮಿದ ಅನಿಸಿಕೆಗಳಿಗೆ ಅಕ್ಷರ ರೂಪ ಕೊಟ್ಟು ಕವನಗಳನ್ನಾಗಿಸಿದ್ದಾರೆ. ವಸ್ತು, ನಿರೂಪಣಾ ಶೈಲಿಯಿಂದ ಇಲ್ಲಿಯ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ.
ಲೇಖಕ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ಅವರು ಮೂಲತಃ (ಜನನ: 01-06- 1989) ತಂದೆ - ಆರ್.ಪ್ರಕಾಶಗೌಡ ತಾಯಿ - ಆರ್.ಅನ್ನಪೂರ್ಣಮ್ಮ. ಬೈರಗಾಮದಿನ್ನೆ ಹಾಗೂ ಕೊತ್ತಲಚಿಂತಾದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ, ಬಳ್ಳಾರಿಯಲ್ಲಿ ಪಿಯು ಕಾಲೇಜು ನಂತರ ಡಿ.ಎಡ್, ತದನಂತರ ಬಿ.ಎ. ಪದವಿ ಪಡೆದರು. ಕನ್ನಡ ವಿ.ವಿ.ಯಿಂದ ಡಿಪ್ಲೊಮಾ ಇನ್ ಡ್ರಾಮಾ, ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಿ.ಎಡ್, ಮೈಸೂರು ವಿಶ್ವವಿದ್ಯಾಲಯದ ಕೆ-ಸೆಟ್ ಪರೀಕ್ಷೆಯಲ್ಲಿ ನಾಟಕ ಕಲೆ ವಿಷಯದಲ್ಲಿ ರಾಜ್ಯಕ್ಕೆ ಅತಿಹೆಚ್ಚು ಅಂಕ ಗಳಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಿಂದ ನಾಟಕ ಕಲೆಯ ಸ್ನಾತಕೋತ್ತರ ಪದವಿಯಲ್ಲಿ ಅತಿಹೆಚ್ಚು ಅಂಕ ಗಳಿಸಿ "ಚಿನ್ನದ ಪದಕ"ಪಡೆದಿದ್ದಾರೆ. ಪ್ರಶಸ್ತಿಗಳು : ಬಳ್ಳಾರಿ ...
READ MORE