ಕವಿ ಜಿ. ಎಚ್. ಜ್ಯೋತಿಲಿಂಗಪ್ಪ ಶಿವನಕೆರೆ ಅವರ ಅಪರೂಪದ ಕವಿತೆಗಳ ಸಂಗ್ರಹವಾದ ’ಬಿಸಿಲು ಹನಿ’ ವಿನೂತನ ಪರಿಕಲ್ಪನೆಯಾಗಿದೆ.
ಕಾಯಿ-ನೆರಳು, ಮಂಜು-ಬಿಸಿಲು, ಕತ್ತಲೆ-ಬೆಳಕು, ಬಯಲು-ಬೆತ್ತಲೆ, ಶಬ್ದ-ಮೌನ, ಅರಿಯದು -ಹರಿಯದು, ಇವುಗಳ ಮುಖಾಮುಖಿಗೊಳಿಸುವ ಕವಿಯ ಅಂತರಂಗವನ್ನು ತೆರೆದಿಡುತ್ತದೆ.
ವಿಷಾದ, ತಳಮಳ, ಸಂಕಟ-ನೋವುಗಳಿಗೆ ನೆಲೆ ಕಂಡುಕೊಳ್ಳುವ ಯತ್ನಕ್ಕೆ ವಚನಗಾರ್ತಿ ಅಕ್ಕಮಹಾದೇವಿಯನ್ನು ಎದುರುಗೊಳ್ಳುವ ಕಲ್ಪನೆ ಇಲ್ಲಿ ಸಾಗುತ್ತದೆ. ಕವಿಯು ಸಾಗುವ ಹಾದಿಯಲ್ಲಿ ಎದುರಾಗುವ ಹಲವು ಸಂಕಟಗಳ ’ಬಿಸಿಲು ಹೊಳೆ’ ಯಲಿ ದೋಣಿ ಇಳಿಸಿ – ಚಲಿಸಲು ಅಕ್ಕನೊಂದಿಗೆ ಸಂವಾದ ನಡೆಸುತ್ತಾ ಸಾಗುತ್ತಾರೆ.
ಮೂಲತಃ ಚಿತ್ರದುರ್ಗದ ಬೇಡರ ಶಿವನಕೆರೆಯವರಾದ ಜ್ಯೋತಿಲಿಂಗಪ್ಪ ಅವರು 15-11-1950ರಂದು ಜನಿಸಿದರು. ತಂದೆ- ಹನುಮಂತಪ್ಪ ಎಸ್.ಜಿ., ತಾಯಿ- ಕಲ್ಲಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಫ್ರೌಢಶಿಕ್ಷಣವನ್ನು ಸಿರಿಗೆರೆಯಲ್ಲಿ, ಬಿ.ಎಸ್ಸಿ ಪದವಿಯನ್ನು ಬೆಂಗೂರಿನಲ್ಲಿ ಪೂರೈಸಿದ್ದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ ಹಾಗೂ ಹಿಮಾಚಲ ಪ್ರದೇಶದ ಶೀಮ್ಲಾದಲ್ಲಿ ಎಂ.ಎಡ್, ಜೊತೆಗೆ ಮೈಸೂರಿನಲ್ಲಿ ಡಿಪ್ಲೊಮಾ ಇನ್ ತಮಿಳು ಪದವಿಗಳನ್ನು ಪಡೆದಿದ್ದಾರೆ. ಆನಂತರ ಭದ್ರಾವತಿಯ ಅಗರದಳ್ಳಿಯಲ್ಲಿ ಫ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು 1997ರಿಂದ 2010ರವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಗರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಫೋಟೋಗ್ರಾಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು ...
READ MORE