‘ಬೇಲಿಯ ಗೂಟದಲ್ಲೊಂದು ಚಿಟ್ಟೆ’ ಕೃತಿಯು ನಾ. ಮೊಗಸಾಲೆ ಅವರ ಕವನಸಂಕಲನವಾಗಿದೆ. ಇಲ್ಲಿನ ಕವಿತೆಗಳು ಲೋಕದ ವಾಸ್ತವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುತ್ತವೆ. ಇಲ್ಲಿ ನಡೆಯುವ ಅನುಕ್ಷಣದ ವ್ಯಾಪಾರಗಳನ್ನು ಒಳಗು ಮಾಡಿಕೊಂಡು ಅದಕ್ಕೊಂದು ಅಸ್ಮಿತೆ ತುಂಬುವ ಕಾವ್ಯ ಸೌಂದರ್ಯ ಇವರದು. ಹುಸಿ ಕಾವ್ಯದ ಸೊಬಗಿನಲ್ಲಿ ಇವರಿಗೆ ನಂಬಿಕೆಯಿಲ್ಲ. ಅನುಭವದೊಂದಿಗೆ ಬರೆಯುವ ಪ್ರಜ್ಞೆ ಅವರಿಗೆ ಮುಖ್ಯವಾದುದು. ವಾಸ್ತವವನ್ನು ಮೀರುವ ಕಲ್ಪನೆಗಿಂತಲೂ ವಾಸ್ತವವನ್ನು ಹಸನು ಮಾಡುವ ಕಡೆಗೆ ಕಾವ್ಯದ ನೋಟವಿದೆ. ಇರುವ ಲೋಕವೇ ಅವರಿಗೆ ಪ್ರಮಾಣವಾಗಿದೆ. ಹಾಗೆಯೇ ಇಲ್ಲಿ ಹೊಸ ಬಗೆಯ ಕಾವ್ಯದ ಜೊತೆಗೆ, ಗೋಪಾಲಕೃಷ್ಣ, ಕೆ.ಎಸ್. ನಿಸಾರ ಅಹ್ಮದ್ ಕಾವ್ಯಗಳ ಎಳೆಗಳ ಜೊತೆ ಸೇರಿಕೊಳ್ಳುವ ಕಾವ್ಯ ಪ್ರಯೋಗವನ್ನು ಸಂಕಲನದಲ್ಲಿ ಕಾಣಬಹುದಾಗಿದೆ.
ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...
READ MORE