ಲೇಖಕ ಪ್ರವೀಣ ಚಿತ್ತಾಪುರ ಅವರ ಮೊದಲ ಹನಿಗವನಗಳ ಸಂಕಲನ- ʻರೈಲು ಹನಿʼ. ಜೀವನದ ಹಳಿ ತಪ್ಪುವ ಘಟನೆಗಳನ್ನು ಹಾಸ್ಯದ ಹೊನಲಿನೊಂದಿಗೆ ರಚಿಸಿದ ಹನಿಗವನಗಳ ಸಂಕಲನವಿದು. ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರು ಬರೆದ ಬೆನ್ನುಡಿಯಲ್ಲಿ, ʻಆಧ್ಯಾತ್ಮದ ತತ್ವಗಳನ್ನು ಹುಡುಕುವವನಿಗೆ, ನಿಂತ ನೀರಿನಿಂದ ಹಿಡಿದು ಶಿರವೆತ್ತಿ ನಿಂತ ಶಿಖರದವರೆಗೂ ಶಿಷ್ಯತ್ವ ವಹಿಸಿದರೆ, ಶಿಕ್ಷಣ ಸಿಗುವುದೆಂಬ ಸತ್ಯವನ್ನು ಚಲಿಸುವ ರೈಲಿನಲ್ಲಿ ಕಂಡು ಅದನ್ನು ಶಿಷ್ಟವಾದ ರೀತಿಯಲ್ಲಿ ಸಾಲುಗಳಲ್ಲಿ ಹೊಸೆದಿರುವ ರೀತಿ ಸಂತಸ ತರುವಂತಿದೆʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಲೇಖಕ ಪ್ರವೀಣ ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರದವರು. ಹೈದ್ರಾಬಾದಿನಲ್ಲಿ ಎಂಜಿನಿಯರ್ ಆಗಿದ್ದಾರೆ. ಉದಯ ವಾಹಿನಿಯ ʻನಾನು ನನ್ನ ಕನಸುʼ ಧಾರಾವಾಹಿ, ಕೆಲವು ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಮುಖ ಪತ್ರಿಕೆಗಳಲ್ಲಿ ಇವರ ಕವಿತೆಗಳು ಪ್ರಕಟವಾಗಿವೆ. ಸಂಪದ ಸಾಲು ಮಾಸಿಕ ಪತ್ರಿಕೆಯಲ್ಲಿ ಅಂಕಣ ಬರಹಗಳನ್ನು ಪ್ರಕಟಿಸಿದ್ದು, ರಾಯಚೂರು, ಹೈದ್ರಾಬಾದ್ ಆಕಾಶವಾಣಿಯಲ್ಲಿ ಕವಿತೆಗಳು ಪ್ರಸಾರವಾಗಿವೆ. ಕೃತಿಗಳು: ರೈಲು ಹನಿ (ಹನಿಗವನಗಳ ಸಂಕಲನ), ಪ್ರಶಸ್ತಿ ಪುರಸ್ಕಾರಗಳು : ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ʻಕೆ.ಎಸ್. ನರಸಿಂಹಸ್ವಾಮಿ ಪ್ರಶಸ್ತಿ. ನಮ್ಮ ಕನ್ನಡ ತಂಡ ಎಂಬ ವೈದ್ಯ ಸಮೂಹದ ಆನ್ ಲೈನ್ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ. ...
READ MORE