ಗೆಳತಿ ಮತ್ತೊಮ್ಮೆ ಯೋಚಿಸು- ಎಚ್. ಲಕ್ಷ್ಮೀನಾರಾಯಣಸ್ವಾಮಿ ಅವರ ಕವನ ಸಂಕಲನ. ಎಪ್ಪತ್ತರ ದಶಕದಲ್ಲಿ ಕರ್ನಾಟಕದ ಬೀದಿಗಳಲ್ಲಿ ಕೂಗಿದ ದಲಿತ ಅನ್ನುವ ಪದ ತಮಟೆಯ ಲಯದಂತೆ ಎದೆಯ ದನಿಯಾಗಿ ಕೇಳಿಸಿತ್ತು. ಮೈನೆರೆದ ಹುಡುಗಿಯಂತೆ ಮುಗ್ಧತೆ ನಾಚಿಕೆ ಸಂಭ್ರಮ ನೆನಪು ಮತ್ತು ಕನಸುಗಳನ್ನು ಮೈಗೂಡಿಸಿಕೊಂಡು ಓಡಾಡುತ್ತಿತ್ತು. ಈಗ ಮದುವೆಯಾಗಿ ಮಕ್ಕಳನ್ನು ಹೆತ್ತ ತಾಯಿಯಂತೆ ದಲಿತ ಪದ ತಿರುಗಾಡುತ್ತಿದೆ. ದಲಿತ ಚಳುವಳಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲಘಟ್ಟದಲ್ಲಿ ಅಸ್ಪೃಶ್ಯತೆ ಅನುಭವದಂತಹ ಸಾಮಾಜಿಕ ಸಂಕಟವನ್ನು ವಿರೋಧಿಸುವ ಕ್ರಮವಾಗಿ ದಲಿತರನ್ನು ಎಚ್ಚರಿಸುವ ನೆಪದಲ್ಲಿ ಇಕ್ರಲ ವದಿರ್ಲ ಈ ನನ್ ಮಕ್ಳು ಚರ್ಮ ಎಬ್ರಲ ಎಂಬ ಪ್ರತಿಭಟನಾ ಮಾದರಿ ಕಾವ್ಯ ಹುಟ್ಟಿತ್ತು. ಇಕ್ಕಲು ಆಗದ ವದೆಯಲು ಆಗದ ಅಂಗವಿಕಲ ಸ್ಥಿತಿ ಇರುವ ಈ ಸಂದಿಗ್ಧ ಸಂದರ್ಭದಲ್ಲಿ ಕವಿ ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರು ಗೆಳತಿ ಮತ್ತೊಮ್ಮೆ ಯೋಚಿಸು ಎಂಬ ಕವನ ಸಂಕಲನದ ಮೂಲಕ ಎಪ್ಪತ್ತರ ದಶಕದ ದಲಿತ ಸಂಭ್ರಮವನ್ನು ನೆನೆದಿದ್ದಾರೆ. ಈ ಕವಿಯ ಸಂಭ್ರಮ ‘ನಾನು ದಲಿತ ಕವಿ’ ಎಂಬ ಅಹಂ ಅನ್ನು ನಿರಾಕರಿಸಿ ಅಂತರಂಗದ ಸಾಮಾಜಿಕ ಸಂಕಟ ಮತ್ತು ಸ್ವಾಭಿಮಾನವನ್ನು ಈ ಕೃತಿ ಧ್ವನಿಸುತ್ತದೆ.
ಲೇಖಕ ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರು (1987) ಬೆಂಗಳೂರಿನವರು. ಬೆಂಗಳೂರು ವಿ.ವಿ ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸದ್ಯ, ಅದೇ ಕೇಂದ್ರದಲ್ಲಿ ಹಿರಿಯ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಕೃತಿಗಳು: ಗೆಳತಿ ಮತ್ತೊಮ್ಮೆ ಯೋಚಿಸು, ಮುಟ್ಟಿನ ನೆತ್ತರಲ್ಲಿ’, ಉರಿವ ಕೆಂಡದ ಸೆರಗು (ಕವನ ಸಂಕಲನಗಳು), ಜಾಲಿಮರದ ಜೋಳಿಗೆಯಲ್ಲಿ ಎಂಬ ಖಂಡಕಾವ್ಯ ಕೃತಿ, ಇವರ ‘ತೊಗಲ ಚೀಲದ ಕರ್ಣ’ ಕೃತಿಗೆ 2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಲಭಿಸಿದೆ.ತೊಗಲ ಚೀಲದ ಕರ್ಣ, ಸಾಣೆಗಲ್ಲು, ಬಹುಪರಾಕಿನ ಸಂತೆಯೊಳಗೆ (ವಿಮರ್ಶಾ ಕೃತಿ) ಡಾ. ಎಸ್ ಎನ್ ಲಕ್ಷ್ಮೀನಾರಾಯಣ ಭಟ್ಟರ ಕುರಿತ ಕಿರು ಹೊತ್ತಿಗೆ ಪ್ರಕಟಿಸಿದ್ದಾರೆ. ಬೆಂಗಳೂರು ಸಾರಿಗೆ ಸಂಸ್ಥೆ ನೀಡುವ ...
READ MORE