ಕವಿ ಆನಂದ ಕಂದ ಅವರೇ ಹೇಳುವಂತೆ ಒಡನಾಡಿ ಕವನ ಸಂಕಲನದಲ್ಲಿಯ ಬಹುತೇಕ ಹಾಡುಗಳು ಭಾವಗೀತೆಗಳು. ಬಗೆವಾಡುಗಳು. ಇವುಗಳನ್ನು ಬರೀ ಓದಿಕೊಳ್ಳುವುದಕ್ಕಿಂತ ಹಾಡಿಕೊಂಡರೆ ಹೆಚ್ಚು ಚೆನ್ನಾಗಿರುವುದು. ಹತ್ತು ವರ್ಷ ಕತ್ತಲೆಯಲ್ಲಿ ಬಿದ್ದುಕೊಂಡಿದ್ದ ಈ ಪುಸ್ತಕವು, ಇದ್ದುದರಲ್ಲೇ ಮುದ್ದಾದ ಉಡುಗೆ-ತೊಡಿಗೆಯುಟ್ಟು ಅಚ್ಚುಕಟ್ಟಾಗಿದೆ ಎಂದು ತಮ್ಮ ಕವನಗಳನ್ನು ಸಂಭ್ರಮಿಸಿದ್ದಾರೆ. ಒಡನಾಡಿ, ಚೆಂದದೊಡತಿ, ನನ್ನಾಕೆಗೆ, ಮಾಲೆಗಾರನ ಮಾತು, ಹಚ್ಚs ದೀಪಾ ನಲ್ಲೆ, ಬಂತು ಬಂತು ಮಾಹಿ ಹೀಗೆ ಒಟ್ಟು 28 ಕವನಗಳು ಸಂಕಲನದಲ್ಲಿವೆ.
ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ 1900ರ ಏಪ್ರಿಲ್ 16ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ.. ಕೃಷ್ಣಶರ್ಮರು 12ನೇ ವರ್ಷದವನಿರುವಾಗ ತಂದೆ, 15ನೇ ವರ್ಷಕ್ಕೆ ಅಣ್ಣ ಹಣಮಂತರಾಯ, 18ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೆ ತಮ್ಮ 14ನೇ ವಯಸ್ಸಿನಲ್ಲಿ ವಿಷಮಶೀತ ಜ್ವರ ಹಾಗೂ 15ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. 1928ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು 56 ವಯಸ್ಸಿನವರಿದ್ದಾಗ ಮಗಳು ಹಾಗೂ ಮರು ವರ್ಷವೇ ಪತ್ನಿ ತೀರಿ ಹೋದರು. 5ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ 5 ...
READ MORE