ರವಿ ಕಾಣದನ್ನು ಕವಿ ಕಂಡ ಎನ್ನುವಂತೆ ಸ್ವಯಂವರ ಕವಿಯ ಕಲ್ಪನೆಗಳು ಇಲ್ಲಿ ಅಕ್ಷರ ರೂಪ ಪಡೆದಿವೆ. ಸದಾ ನಿಂತೇ ಇರೋ ಬೆಟ್ಟಕ್ಕೆ ಓಡಾಡಬೇಕು ಅನ್ನಿಸಿದಾಗ, ಅಥವಾ ಬಾಯಿಲ್ಲದೆ ಇರುವ ಕಾಡಿಗೆ ಮಾತಾಡಬೇಕು ಅನ್ನಿಸಿದಾಗ, ಮತ್ತೆ ನಮ್ಮನ್ನೆಲ್ಲ ಹೊತ್ತ ಭೂಮಿಗೆ ನಗಬೇಕು ಅನ್ನಿಸಿದಾಗ ಆ ಎಲ್ಲ ಆಕಾಂಕ್ಷೆಗಳೇ ಪಡೆಯುವ ರೂಪ. ಆದರೆ ಮನುಷ್ಯರ ಅಪೇಕ್ಷೆ ಅದಕ್ಕೆ ತದ್ವಿರುದ್ಧ. ಕಲ್ಪನೆ ಹಾಗೂ ವಾಸ್ತವಗಳ ನಡುವಿನ ಅಂತರ, ವ್ಯತ್ಯಾಸ ಹಾಗೂ ವಾಸ್ತವಕ್ಕೆ ಹತ್ತಿರವಾದ ಕವಿತೆಗಳು ಈ ಕೃತಿಯಲ್ಲಿವೆ.
ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ. ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...
READ MORE