ಜಗತ್ತಿನಾದ್ಯಂತ ನಡೆಯುತ್ತಿರುವ ಭಯೋತ್ಪಾದನೆಯ ಹಿಂಸೆ ಕ್ರೌರ್ಯ ರಕ್ತಪಾತವನ್ನು ಕಂಡು ಭಯಗ್ರಸ್ತಭಾವದಲ್ಲಿ ಪ್ರಶ್ನಿಸಿದ್ದಾರೆ ಕವಯತ್ರಿ. ಈ ದಿನ ಜಗತ್ತಿನ ಯಾವ ಮೂಲೆಯೂ ಸುರಕ್ಷಿತವಾಗಿಲ್ಲ ಮತ್ತು ಭಯೋತ್ಪಾದನೆಯ ಕ್ರೌರ್ಯ, ಮೂರ್ತ ಹಾಗೂ ಅಮೂರ್ತ ರೂಪದಲ್ಲಿಯೂ ವ್ಯಾಪಿಸುತ್ತಿದೆ. ನೀಲಿ ಪೆನ್ನಿನ ಬದಲು ಚಾಕು ಚೂರಿ ಪಿಸ್ತೂಲುಗಳು ಜಗತ್ತನ್ನು ಆಳುತ್ತಿವೆ. ಮಾನವ ಸಂಬಂಧಗಳನ್ನು ಬೆಳೆಸುವ ಸಾಂಸ್ಕೃತಿಕ ಬದುಕಿನ ಗತಿಯು ಯಾವ ದಿಕ್ಕು ಹಿಡಿಯಬಹುದು? ಎಂಬ ಪ್ರಶ್ನೆಗಳು ಕವಯತ್ರಿಯ ಮನದಲ್ಲಿ ಭಯ ಮಡುಗಟ್ಟಿದ ನೋವಾಗಿದೆ. ಆದರೆ ನಿರಾಶೆಯೇ ಅಂತಿಮವಲ್ಲ ಆಸೆಯ ಹಂಬಲದಲ್ಲಿ ಬೆಳಕಿನ್ನು ಹುಡುಕುವ ವಿಶ್ವಾಸ. ಬೇರುಗಳು ಒಂದು ವಿಶಿಷ್ಟ ಅನುಭವ ನೀಡುವ ಪದ್ಯವಾಗಿದೆ.
ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು. “ಪ್ರವಾಸ ಸಾಹಿತ್ಯ ...
READ MORE