`ಹರಿಯುವ ನದಿಗೆ ಮೈಯೆಲ್ಲಕಾಲು’ ಜಂಬಣ್ಣ ಅಮರಚಿಂತ ಅವರ ಕವನಸಂಕಲನವಾಗಿದೆ. ಇಂದಿನ ಮನುಷ್ಯನ ಖಾಲಿತನ, ಬೇಕೆಂದೇ ಬರಮಾಡಿ ಕೊಂಡ ಕಷ್ಟ ಕೋಟಲೆಗಳು, ಎಲ್ಲದಕ್ಕೂ ಕಿವುಡಾಗುವ ನಮ್ಮ ಉದ್ಧಟತನದ ನಿರ್ಲಕ್ಷ್ಯ ಇವೆಲ್ಲವನ್ನೂ ಗೇಲಿ ನೀರಾಗದೆ ಮಾಡುತ್ತ ಕಿವಿ ಮಾತೂ ಹೇಳುತ್ತ ಈ ಕವನಗಳು ರೂಪುಗೊಂಡಿವೆ. ಭ್ರಮೆ ಮತ್ತು ವಾಸ್ತವಿಕತೆಯ ಮುಖವನ್ನು ಗುರುತಿಸುವ ಜಾಣೆ ಎಷ್ಟು ಅವಶ್ಯಕವೆಂದು ಸಂಕಲನದ ಒಂದು ಕವಿತೆ "ಮಾಯಾದರ್ಪಣ'' ಚೆನ್ನಾಗಿ ನಿರೂಪಿಸಿದೆ.
ಜಂಬಣ್ಣ ಅಮರಚಿಂತ ಅವರು 1945 ಏಪ್ರಿಲ್ 7ರಂದು ರಾಯಚೂರಿನಲ್ಲಿ ಜನಿಸಿದರು. ಆರೋಗ್ಯ ಇಲಾಖೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಜಂಬಣ್ಣ ಅವರು ಬರೆದ ಪ್ರಮುಖ ಕೃತಿಗಳೆಂದರೆ ಮುಂಜಾವಿನ ಕೊರಳು, ಅಧೋ ಜಗತ್ತಿನ ಆಕಾವ್ಯ; (ಕವನ ಸಂಗ್ರಹಗಳು), ಝರಿ-ಬೆಟ್ಟ (ಕಾದಂಬರಿ),ಅಮರಚಿಂತ ಕಾವ್ಯ (ಸಮಗ್ರ ಕಾವ್ಯ). ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ...
READ MOREಹೊಸತು-2004- ಅಕ್ಟೋಬರ್
ಇಂದಿನ ಮನುಷ್ಯನ ಖಾಲಿತನ, ಬೇಕೆಂದೇ ಬರಮಾಡಿ ಕೊಂಡ ಕಷ್ಟ ಕೋಟಲೆಗಳು, ಎಲ್ಲದಕ್ಕೂ ಕಿವುಡಾಗುವ ನಮ್ಮ ಉದ್ಧಟತನದ ನಿರ್ಲಕ್ಷ್ಯ ಇವೆಲ್ಲವನ್ನೂ ಗೇಲಿ ನೀರಾಗದೆ ಮಾಡುತ್ತ ಕಿವಿ ಮಾತೂ ಹೇಳುತ್ತ ಈ ಕವನಗಳು ರೂಪುಗೊಂಡಿವೆ. ಭ್ರಮೆ ಮತ್ತು ವಾಸ್ತವಿಕತೆಯ ಮುಖವನ್ನು ಗುರುತಿಸುವ ಜಾಣೆ ಎಷ್ಟು ಅವಶ್ಯಕವೆಂದು ಸಂಕಲನದ ಒಂದು ಕವಿತೆ "ಮಾಯಾದರ್ಪಣ'' ಚೆನ್ನಾಗಿ ನಿರೂಪಿಸಿದೆ. ಮನುಷ್ಯನ ಬದುಕು ನಿಂತ ನಿರಂತರ ಚಲನೆ ಮತ್ತು ಪರೋಪಕಾರಿಯಾಗಿ ಹರಿಯುವ ನದಿಯಂತಾಗಬೇಕೆಂಬುದು ಇಲ್ಲಿನ ಕವಿತೆಗಳ ಆಶಯ. ನಲವತ್ತೊಂದು ಕವಿತೆಗಳ ಸಮೂಹದಲ್ಲಿ ರಾಯಚೂರಿನ ಕಾವ್ಯಪ್ರಕಾರವಾದ ಗಜಲ್‌ಗಳು ಹಾಗೂ ಕೆಲವು ಚುಟುಕುಗಳೂ ಸೇರಿವೆ. ಕಾವ್ಯಭಾಷೆ ತೀರ ಲಘುವಾಗಿಲ್ಲದೆ ಸ್ವಲ್ಪ ಬಿಗುವಿದೆ.