‘ವೈಶಾಖದ ಹನಿಗಳು’ ರಂಜನಿ ಪ್ರಭು ಅವರ ರಚನೆಯ ಕವನಸಂಕಲನವಾಗಿದೆ. ಈ ಕವನ ಸಂಕಲನದ ಪುಟ ತೆರೆದಾಗಲೆ, ಆಕರ್ಷಕವಾದ ಜೋಗಿಯವರ, ವಿಶಿಷ್ಟವಾದ ಮುನ್ನುಡಿಯಲ್ಲಿ ಕವಿತೆಗಳ ಮೆರಗನ್ನು, ಇನ್ನೂ ಹೆಚ್ಚಿಸಿ ಬಿಡುತ್ತದೆ ."ಅಚ್ಚರಿ ಬೆರೆತ ಅಸೂಯೆಯಿಂದಲೂ, ವಿಸ್ಮಯಕಾರಿ ಅನುಮಾನದಿಂದಲೂ ಮೆಚ್ಚಿಕೊಳ್ಳಬಹುದಾದ ಕವಿತೆಗಳು ಇವು. ಕಾಲ ಕಾಲಕ್ಕೆ, ಪ್ರೇಮ ಪ್ರಕಟಗೊಳ್ಳುವ ಪರಿ, ಬದಲಾಗುತ್ತಾ ಹೋಗಬಹುದು. ಆದರೆ, ಈ ಎಲ್ಲ ಕವಿತೆಗಳ ಅಂತರಾಳದಲ್ಲಿ, ಸುಪ್ತವಾಗಿ ಹರಿಯುತ್ತಿರುವ ಸೆಲೆ ಒಂದೇ ಎನ್ನುವುದನ್ನು ಗುರುತಿಸಬಹುದು. ಎಂದು ಸಾಕಷ್ಟು ಕವಿತೆಗಳ ಬಗ್ಗೆ ಅದ್ಭುತವಾದ ಸೌಂದರ್ಯ ವನ್ನೆ ತುಂಬಿದ ಮುನ್ನುಡಿ. ನಾವು ಕೂಡ, ಕವಿತೆಗಳನ್ನು ಓದುತ್ತಾ ಹೋದಂತೆ, ಪ್ರೇಮವೇ ಪ್ರಧಾನ ಪಾತ್ರವಾಗಿಹ, ಇವರು ಕವಿತೆಯನ್ನು ನೋಡುವ ಕ್ರಮ ವಿಶೇಷವೇ ಆಗಿದೆ. ಆರಂಭಿಕ, ಕವಿತೆಯೇ, ಪದಗಳೇ ದಳ ತೆರೆದ ಹಾಗೆ, ಮೊಗ್ಗು ಬಿರಿದ ಹಾಗೆ, ನಡು ಮನೆಯ ತೊಟ್ಟಿಲಲ್ಲಿ, ಗೆಜ್ಜೆ ಸದ್ದು ಎದ್ದ ಹಾಗೆ ನಿನ್ನ ಮಾತು ಇನಿಯ. ನಿನ್ನ ಮಾತು ಎಂದು ಒಂದೊಂದು ಹನಿಯೂ, ತೆರೆದುಕೊಳ್ಳುತ್ತಾ ಹೋಗುತ್ತದೆ ಜಯಶ್ರೀ ಕಟ್ಟೆಪುರ ಅವರು ತಿಳಿಸಿದ್ದಾರೆ.
ರಂಜನಿ ಪ್ರಭು ಅವರು ಮೂಲತಃ ಬೆಂಗಳೂರಿನವರು. ಎಂ.ಇ.ಎಸ್. ಕಾಲೇಜಿನಲ್ಲಿ ಪಿಯುಸಿ, ಮಹಾರಾಣಿ ಕಾಲೇಜಿನಲ್ಲಿ ಪದವಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಬೆಂಗಳೂರಿನ ಸೇಂಟ್ ಆ್ಯನ್ಸ್ ಕಾಲೇಜಿನಲ್ಲಿ 35 ವರ್ಷಗಳ ಕಾಲ ಬೋಧನೆ ನಡೆಸಿ ಕನ್ನಡ ವಿಭಾಗದ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. “ತುಷಾರ’ ಮಾಸ ಪತ್ರಿಕೆಗೆ 'ಬಾಲ್ಯಕಾಲದ ಸಖೀ’ ಎಂಬ ಲೇಖನ ಬರೆದರು. ಅದಾದ ಬಳಿಕ ಅವರ ಹಲವಾರು ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈವರೆಗೆ ಅವರ 2 ಕವನ ಸಂಕಲನ, ನಾಲ್ಕು ಭಾವಗೀತೆಗಳ ಕ್ಯಾಸೆಟ್ ಗಳು(ಸೀಡಿ) ಹೊರಬಂದಿದೆ. ಕೃತಿಗಳು: ವೈಶಾಖದ ...
READ MORE