ಜೀವಸಂಕುಲವನ್ನು ಕಾಡುತ್ತಿರುವ ಸಾವು-ನೋವು , ಹರಿತ ಮುಳ್ಳಿನ ಕೆಳಗೆ ಇಂದಿನ ಮನುಷ್ಯ ಬದುಕಬೇಕಾಗಿರುವ ಬಿಕ್ಕಟ್ಟು, ಸಂಕಟ ಲೇಖಕ ಪ್ರವೀಣ್ ಬಿ.ಎಂ ಅವರ ‘ನೆಲದ ಹುಣ್ಣು’ ಕವನಸಂಕಲನದಲ್ಲಿ ಅಮೂರ್ತವಾಗಿ ಮಡುಗಟ್ಟಿ ನಿಂತಿದೆ. ಈ ಸಂಕಲನದಲ್ಲಿ ಮೂವತ್ತೊಂಬತ್ತು ಕವಿತೆಗಳಿವೆ. ಇಲ್ಲಿಯ ಎಲ್ಲಾ ಕವಿತೆಗಳು ವಾಚ್ಯದ ಸಾಧಾರಣ ಗುಣವನ್ನು ಮೀರಿ ಸೂಚವೂ ಧ್ವನಿಪೂರ್ಣವೂ ಆದ ಬಂಧುರ ರಚನೆಯಾಗಿರುವುದು ವಿಶೇಷವಾಗಿದೆ. ಇನ್ನು ಜೀವಸಂಕುಲ ಹಿಂಸೆಯಿಂದ ಮನುಕುಲ ಬಿಡುಗಡೆಯಾಗುವ ಪ್ರಶ್ನೆಗೆ ಬುದ್ಧನ ಜೀವಪರ ಕಾಳಜಿ, ಸ್ವಸ್ಥ -ನಿಶ್ಚಿಂತ-ಶಾಂತಸ್ಥಿತಿ ಪರ್‍ಯಾಯವೆಂಬುದನ್ನು ಇಲ್ಲಿಯ ಕವಿತೆಗಳು ಧ್ವನಿಸುತ್ತವೆ. ದೇವರು ಧರ್ಮದ ಹೆಸರಿನಲ್ಲಿ ನಡೆಯುವ ಬೂಟಾಟಿಕೆ: ಮತಾಂಧತೆಯ ದಳ್ಳುರಿಯಲ್ಲಿ ನಲುಗುತ್ತಿರುವ ಅಮಾಯಕರ ಅಸಹಾಯಕ ಸ್ಥಿತಿಯನ್ನು ಕಾವ್ಯ ಆಳವಾದ ವಿಷಾದದದಲ್ಲಿ ಅನಾವರಣಗೊಳಿಸಿದೆ. ಸಮಾಜದಲ್ಲಿ ಸರ್ವತ್ರ ಸಾಂಕ್ರಾಮಿಕ ರೋಗದಂತೆ ಹರಡಿರುವ ಕೊಳಕುತನದ ವಾಸ್ತವ ಸ್ಥಿತಿಯನ್ನು ವರ್ಣಿಸುತ್ತಲೇ ಮನುಷ್ಯನ ಬಹುಮುಖಿಯಾದ ಧೂರ್ತತನ ಬಯಲಾಗುವ ಕಾಲ ಹತ್ತಿರ ಬರುತ್ತಿದೆ ಎನ್ನುವುದನ್ನು ಇಲ್ಲಿನ ಕವಿತೆಗಳಲ್ಲಿ ಕಾಣಬಹುದಾಗಿದೆ.
©2024 Book Brahma Private Limited.