ಲೇಖಕ-ಕವಿ ಬಿ.ಎಂ. ಬಶೀರ್ ಅವರ ಕವಿತೆಗಳ ಸಂಕಲನ. ‘ನಾನು ಬರೆದಿದ್ದು ನಾಲ್ಕೇ ನಾಲ್ಕು ಸಾಲು, ನಾನು ಸತ್ತಾಗ ಹೆಗಲು ಕೊಡುವುದಕ್ಕೆ ಇರಲಿ ಎಂದು ’ ಇಂತಹ ಸಾಲುಗಳ ಮೂಲಕ ಕಾವ್ಯಾಸಕ್ತರ ಗಮನ ಸೆಳೆದಿರುವ ಕವಿ ಬಿ.ಎಂ. ಬಶೀರ್ ಅವರು ಎಲ್ಲ ಧರ್ಮಗಳ ಸಾರವೇ ಮಾನವೀಯತೆ ಆಗಿದೆ. ಮನುಷ್ಯರು ಅದನ್ನು ಉಸಿರಾಡದಿದ್ದರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂಬ ಎಚ್ಚರಿಕೆಯೊಂದಿಗೆ ಕಾವ್ಯ ರಚಿಸುತ್ತಿದ್ದು, ಕಾವ್ಯ ರಚನೆಯ ಉದ್ದೇಶವನ್ನೂ ಸ್ಪಷ್ಟಪಡಿಸುವಂತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಸಮೀಪದ ಮಠ ಎಂಬ ಊರಿನಲ್ಲಿ ಜನಿಸಿದ ಬಶೀರ್ ಅವರು ಉಪ್ಪಿನಂಗಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ, ಮುಂಬೈ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದವರು. ಮಂಬಯಿ ಕರ್ನಾಟಕ ಮಲ್ಲ’ ಕನ್ನಡ ದೈನಿಕದಲ್ಲಿ ಐದು ವರ್ಷ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ ಅವರು ನಂತರ ಜನವಾಹಿನಿ’ ಕನ್ನಡ ದಿನಪತ್ರಿಕೆಯಲ್ಲಿ ಐದು ವರ್ಷ ಹಿರಿಯ ಉಪಸಂಪಾದಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಒಂದು ದಶಕಕಕ್ಕೂ ಹೆಚ್ಚು ಕಾಲದಿಂದ ವಾರ್ತಾಭಾರತಿ’ ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿದ್ದಾರೆ. ಗೌರಿ ಲಂಕೇಶ್, ಅಗ್ನಿ ...
READ MORE