ಲೇಖಕ ಆನಂದ್ ಋಗ್ವೇದಿ ಅವರ ಕವಿತೆಗಳ ಸಂಕಲನ ‘ಸೌಗಂಧಿಕಾ ಪುಷ್ಪ ಮತ್ತು ಇತರೆ ಕವಿತೆಗಳು’. ಈ ಸಂಕಲನದ ಬೆನ್ನುಡಿಯಲ್ಲಿ ಗೀತಾ ವಸಂತ ಅವರ ಮಾತುಗಳಿದ್ದು, ‘ಆನಂದ್ ಋಉಗ್ವೇದಿ ಅವರ ‘ಬಲಿಗೆ ಬಾಗಿಲಿಲ್ಲ’ ಕವಿತೆ ತನ್ನ ಅನುಭವದ ತೀವ್ರತೆ ಹಾಗೂ ಜಿಜ್ಞಾಸೆಯ ಗುಣದಿಂದಾಗಿ ಚಕಿತಗೊಳಿಸಿತು. ಬಯಲಾಗುವ ಭಾವವನ್ನು ನಮ್ಮ ಪ್ರಜ್ಞೆಯಲ್ಲಿ ಮೂಡಿಸಿದ ಅಲ್ಲಮನ ವಚನಗಳು ನೋಟದ ರಮವನ್ನೇ ಪಲ್ಲಟಗೊಳಿಸುವ ಬೆರಗಿ ರಚನೆಗಳು. ಕನಕದಾಸರಲ್ಲೂ ಬಯಲು ಆಲಯದ ದ್ವಂದ್ವಗಳನ್ನು ಅರಿಯುತ್ತಲೇ ಮೀರುವ ಪ್ರಕೃಯೆಯನ್ನು ಕಾಣುತ್ತೇವೆ. ಆನಂದರ ಕವಿತೆಗಳು ಬಯಲಾಗುವ ಹಂಬಲದಲ್ಲೇ ಹಣ್ಣಾಗಿದೆ’ ಎಂಬುದಾಗಿ ಹೇಳಿದ್ದಾರೆ.
ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ- ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ. ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ...
READ MORE