‘ಇರುಳ ಬಾಗಿಲಿಗೆ ಕಣ್ಣ ದೀಪ’ ಸದಾಶಿವ ದೊಡಮನಿ ಅವರ ಕವಿತೆಗಳಾಗಿವೆ. ಜೀವ ಕಾರುಣ್ಯದ ಕವಿತೆಗಳನ್ನು ಒಳಗೊಂಡ ಈ ಕೃತಿಯನ್ನು ಓದಲು ಹತ್ತು ಹಲವು ಕಾರಣಗಳಿವೆ. ಬಹುತ್ವದ ಆಶಯವನ್ನು ಕಟ್ಟಿಕೊಡುವ ಸಂಕಲನ ಸಮಕಾಲೀನ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಸಮಕಾಲೀನ ಸಂದರ್ಭದ ಸವಾಲುಗಳಿಗೆ ಕವಿತೆಗಳು ಮುಖಾಮುಖಿಯಾಗುತ್ತಲೇ ಸಹೃದಯರಲ್ಲಿ ಸಮ ಸಮಾಜದ ಕನಸುಗಳು ಬೀಜವನ್ನು ಬಿತ್ತುತ್ತವೆ. ಬುದ್ಧನನ್ನು, ಅಕ್ಕನನ್ನು ಇವತ್ತಿಗೂ ಪ್ರಸ್ತುತಗೊಳಿಸುತ್ತಲೇ ಶೋಷಿತ ವರ್ಗಗಳ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಲೇ ಶೋಷಿತ ಸ್ತ್ರೀ ಪರ ಧ್ವನಿಯನ್ನು ಎತ್ತುತ್ತವೆ. ಸಮಾಜದಲ್ಲಿ ಕ್ರೌರ್ಯವನ್ನು ಸಮರ್ಥವಾಗಿ ಚಿತ್ರಿಸುತ್ತವೆ. ಅದಕ್ಕೆ ಮದ್ದಿನ ರೂಪದಲ್ಲಿ ಮನುಷ್ಯ ಪ್ರೀತಿಯನ್ನು ಸಾರುತ್ತವೆ. ಕೌಟುಂಬಿಕ ಜೀವನದ ಪ್ರೀತಿಯ ಅನನ್ಯತೆಯನ್ನು ಎದೆಯಿಂದ ಎದೆಗೆ ದಾಟಿಸುತ್ತವೆ. ಪ್ರೀತಿ, ಸ್ನೇಹ ಸೌಜನ್ಯದ ಬಗ್ಗೆ ಆರೋಗ್ಯಪೂರ್ಣ ಭಾವವನ್ನು ಮೂಡಿಸುತ್ತವೆ. ಬುದ್ಧಂ, ಶರಣಂ, ಗಚ್ಛಾಮಿ ಎನ್ನುತ್ತಲೇ ‘ಇರುಳ ಬಾಳ ಬಾಗಿಲಿಗೆ ಕಣ್ಣ ದೀಪವಾಗಿ’ ನಿಲ್ಲುತ್ತವೆ ಎಂಬುವುದನ್ನು ಈ ಪುಸ್ತಕದಲ್ಲಿ ನೊಡಬಹುದು ಎಂದಿದ್ದಾರೆ ಲೇಖಕ ಸದಾಶಿವ ದೊಡಮನಿ.
ಸದಾಶಿವ ದೊಡಮನಿ ಮೂಲತಃ ಇಳಕಲ್ ನವರು. ಕಾವ್ಯ ಸಂಶೋಧನೆ, ವಿಮರ್ಶೆ ಹೀಗೆ ಹಲವು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹನಿಗವಿತೆಗಳನ್ನು ಬರೆಯುತ್ತಿದ್ದಾರೆ. ಪ್ರಸ್ತುತ ಇಳಕಲ್ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ನೆರಳಿಗೂ ಮೈಲಿಗೆ, ಇರುವುದು ಒಂದೇ ರೊಟ್ಟಿ ...
READ MORE