ಹೃದಯಧಾರೆ

Author : ಬಂಡು ಕೋಳಿ

Pages 72

₹ 75.00




Year of Publication: 2014
Published by: ಬಿ.ಡಿ.ಕೆ
Address: ಬಿ.ಡಿ.ಕೆ

Synopsys

ಲೇಖಕ ಬಂಡು ಕೋಳಿ ಅವರ ‘ಹೃದಯಧಾರೆ’ ಕವನ ಸಂಕಲನವಾಗಿದೆ. ಅಥಣಿಯ ಸಾಹಿತಿ, ವಾಮನ ಕುಲಕರ್ಣಿ ಈ ಕವನ ಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ. ಅವರು ಹೇಳುವಂತೆ, ‘ಕವಿತೆಯೆಂಬುದು ಕುಸುರಿಯ ಕೆಲಸ. ಸೊಕ್ಕಿದ ಸಲಗವನ್ನು ಖೆಡ್ಡಾದಲ್ಲಿ ಹಿಡಿದಿಡುವ ಕಾರ್ಯ ಸುಲಭ ಸಾಧ್ಯವಲ್ಲ.ಹಾರುವ ಹಕ್ಕಿಯ ಹೆಜ್ಜೆಯನ್ನು ಚಿತ್ರಿಸುವ ಈ ಅಮೂರ್ತ ಕ್ರಿಯೆ ಒಂದಷ್ಟು ಪರಿಶ್ರಮವನ್ನು ಬಯಸುತ್ತದೆ. ಇದು ಕೋಳಿಯಂತಹ ಕವಿಗಳಿಗೆ ಅರ್ಥವಾದರೆ ಸಾಹಿತ್ಯಕ್ಕೆ ಔನತ್ಯದ ಕೊಡುಗೆಗಳನ್ನು ಅವರು ನೀಡುತ್ತಾರೆ ಎಂಬ ನಂಬುಗೆ ನನ್ನದಾಗಿದೆ’ ಎಂಬುದಾಗಿ ಕೃತಿಕಾರನ ರಚನೆಯ ಬಗ್ಗೆ ಅಭಿನಂದಿಸಿದ್ದಾರೆ.

About the Author

ಬಂಡು ಕೋಳಿ
(15 May 1980)

ಬೆಳಗಾವಿ ಜಿಲ್ಲೆಯ ಉಗಾರ ಬುದ್ರುಕ ಮೂಲದವರಾದ ಬಂಡು ಧನಪಾಲ ಕೋಳಿ ಅವರು ಬಂಡು ಕೋಳಿ ಎಂಬ ಕಾವ್ಯ ನಾಮವನ್ನು ಹೊಂದಿದ್ದಾರೆ. ಧನಪಾಲ ಹಾಗೂ ಲಕ್ಷ್ಮೀ ಬಾಯಿಯವರ ಮಗನಾಗಿ 15-05-1980ರಂದು ಜನಿಸಿದರು. ಎಮ್.ಎ. ಬಿ.ಇಡಿ ಶಿಕ್ಷಣವನ್ನು ಪೂರ್ತಿಗೊಳಿಸಿ, ಅಥಣಿಯ ವಿದ್ಯಾವರ್ಧಕ ಸಂಸ್ಥೆಯಲ್ಲಿ ಶಿಕ್ಷಣ ವೃತ್ತಿ ಪ್ರಾರಂಭಿಸಿದರು. ಪದವಿ ಕಾಲೇಜಿನ ಬೋಧಕರಾದ ಎಂ.ಬಿ.ಹೂಗಾರ ಅವರ ಪ್ರೋತ್ಸಾಹದಿಮದ ಸಾಹಿತ್ಯ ಓದು ಹಾಗೂ ಸಾಹಿತ್ಯ ಕ್ಷೇತ್ರದತ್ತ ಬರಲು ಕಾರಣವಾಯಿತು. ಗಾಯನ ಹಾಗೂ ಅಭಿನಯ ಇವರ ಇತರೇ ಹವ್ಯಾಸಗಳು. ಇವರ ಪ್ರಕಟಿತ ಕೃತಿಗಳು ; ಹುಡುಕಾಟ(2011) ಕಾದಂಬರಿ, ಹೃದಯಧಾರೆ(2018) ಕವನ ಸಂಕಲನ, ಕೃಷ್ಣಾಯಿ ಜೋಗುಳ(2021) ...

READ MORE

Related Books