ಭಾವನೆ ಮತ್ತು ಬುದ್ಧಿಗಳ ಬಹಳ ತೀವ್ರವಾದ ತೊಡಗಿಕೊಳ್ಳುವಿಕೆ ಮತ್ತು ಲೋಕವಸ್ತುಗಳನ್ನು ಸಾಮಾನ್ಯವಾಗಿ ಬಳಸುವುದಕ್ಕಿಂತ ಭಿನ್ನವಾಗಿ ಬಳಸಿ ಹೊಸ ಬಗೆಯ ರೂಪಕಲೋಕವನ್ನು ಕಟ್ಟುವುದು ಇವು ಪ್ರವೀಣ ಅವರ ಕವಿತೆಗಳಲ್ಲೂ ಇರುವ ಲಕ್ಷಣಗಳು.
ಬುದ್ಧಿ ಮತ್ತು ಭಾವನೆಗಳು ಒಂದೇ ಕವಿತೆಯೊಳಗೆ ಹೆಣೆದುಕೊಂಡು ಪ್ರತಿಮೆಗಳ ಮೂಲಕ ಮೈದಳೆದಾಗ ಯಾವುದು ಎಲ್ಲಿದೆ ಎಂದು ಹುಡುಕುವುದು ಕಷ್ಟ. ಅದರಲ್ಲೂ ಈ ಕವಿಯ ಪ್ರತಿಮೆಗಳು ಒಳಮನಸ್ಸಿನಿಂದ ಮೂಡಿ ಬರುತ್ತವೆ. ಕೆಲವೊಮ್ಮೆ ಇಡೀ ಕವಿತೆಯೇ ಒಂದು ಪ್ರತಿಮೆಯಾದರೆ, ಬೇರೆ ಕೆಲವು ಕಡೆ ಪರಸ್ಪರ ಸಂಬಂಧಗಳನ್ನು ಹೊಂದಿರುವ ಪ್ರತಿಮೆಗಳ ಸರಣಿ. ಸ್ವಾನುಭವವು ಆತ್ಮಮರುಕದಲ್ಲಿ, ಮುಗಿಯದೆ ತಾತ್ವಿಕವಾದ ತೀರ್ಮಾನಗಳನ್ನು ತಲುಪುವ ಹಲವು ಕವಿತೆಗಳು ಇಲ್ಲಿವೆ.
ಯುವ ಕವಿ, ಬರೆಹಗಾರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ 1978ರ ಮಾರ್ಚ್ 11 ರಂದು ಪ್ರವೀಣ ಜನಿಸಿದರು. ನ್ಯಾಯಾಲಯದಲ್ಲಿ ಆರು ವರ್ಷದ ಸೇವೆ ನಂತರ ಅವರು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಸೇವೆಗೆ (2005) ಸೇರಿದರು. ಈ ಮಧ್ಯೆ ಇದೇ ಸಂಸ್ಥೆಯಲ್ಲಿ (2011-2015) ಮಾಲ್ಡಿವ್ಸ್ ನಲ್ಲಿ ಸೇವೆ ಸಲ್ಲಿಸಿದರು. ನಂತರ ಅವರು ಕೆಲಸಕ್ಕೆ ರಾಜೀನಾಮೆ ನೀಡಿ ಡೆಸ್ಟಿನಿ ಎಂಬ ಸಂಸ್ಥೆ ಸ್ಥಾಪಿಸಿ, ಬ್ಯಾಂಕ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತರಬೇತಿ ಆರಂಭಿಸಿದರು. ಯುಟ್ಯೂಬ್ ನಲ್ಲಿಯೂ ಅವರು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಸಂಕಲ್ಪ (ಕಾದಂಬರಿ), ವ್ಯೂಹಗನ್ನಡಿ-ಕಥಾ ಸಂಕಲನ ಹಾಗೂ ’ಓದು, ಕಲಿಕೆ ಹಾಗೂ ...
READ MORE