ಎಂದೆಂದಿಗೂ ಶಿವಾಪುರ

Author : ಚಂದ್ರಶೇಖರ ಕಂಬಾರ

Pages 96

₹ 95.00

Buy Now


Year of Publication: 2021
Published by: ಅಂಕಿತ ಪುಸ್ತಕ
Address: 53, ಶ್ಯಾಮ್‍ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 2661 7755

Synopsys

‘ಎಂದೆಂದಿಗೂ ಶಿವಾಪುರ’ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರ ಕವನ ಸಂಕಲನ. ಕವಿತೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದು, ಮೊದಲ ಭಾಗದಲ್ಲಿ ಶಿವಾಪುರ, ಘಟಪ್ರಭೆ, ಹಕ್ಕಿಯ ಹಾಡು-ಕಾಡು, ಹಸಿವು ದಾಹವಿದು, ಚೇಳಿನ ಪ್ರೀತಿ, ಉಲ್ಕೆಗಳುದುರಿದವೇ!, ಬಿಚ್ಚುಗತ್ತಿಯ ಬಂಟನ ಕತ್ತಿ, ಕಾಡು ಕಾಡು, ನೀನು-ನಾನು, ಹಂಪಿಯ ಕತ್ತಲೆ ಕವಿತೆಗಳಿವೆ. ಎರಡನೇ ಭಾಗದಲ್ಲಿ ‘ಬೆಂಗಳೂರಿನ ರಾತ್ರಿ’, ಲಾಲ್‍ಬಾಗ್, ಬಡಸ್ಕೂಲಿನ ಬಯಲಿನಲ್ಲಿ, ಹಾಯ್ ಬೆಂಗಳೂರ್!, ಒಬಾಮಾಗೆ ಸ್ವಾಗತ, ನಾಟಕಕಾರ ನಟನಿಗೆ, ಅಯ್ಯಾ ಬಿಜ್ಜಳನೇ, ದಂಡೆಯ ಬಂಡೆ, ಲೊಳಲೊಟ್ಟೆ ಕವಿತೆಗಳು ಸಂಕಲನಗೊಂಡಿವೆ. ಮೂರನೇ ಭಾಗದಲ್ಲಿ ‘ಅಳುವ ಸುಖ’ ನಿನ್ನ ನೆನಪಾದೊಡನೆ, ಬಿಂಬ ಪ್ರತಿಬಿಂಬಗಳ ಆಟ, ಇಷ್ಟಾದರು ಮಾಡು, ಒಡಲುಗೊಂಡ ಜಂಗಮ, ನಿಶ್ಶಬ್ದ, ನೀನು ಇರಲೇಬೇಕು, ನನ್ನೊಂದಿಗೆ, ನಿರ್ಲಕ್ಷ್ಯ ಮಾಡದಿರೊ, ಬಯಲು, ದೇವರ ಕಥನ, ಶಿವ ವಿವರಿಸಿದ ನಿಜ, ಗಾಳಿಸುದ್ದಿ, ಜೊತೆ ಪಯಣ ಗರು, ಹೊಸ ಪ್ರಾಣ, ಸೀಥ್ರೂ ಬಿಂಬಗಳು!, ಕಲ್ಲಿನ ಮೂರ್ತಿ, ತಾಳಿ, ದೇವರು, ಮಾಡೆಲ್ ಬೆಡಗಿ, ಮರ-ಕೊಡಲಿಯ ನೆರಳು, ಬೇರು ಮತ್ತು ರೆಕ್ಕೆ, ಮತ್ಸ್ಯಾಲಯ, ತಾಯಿ ಮಗ, ಎಲ್ಲಿ? ನೀನೇ ಇಲ್ಲ!, ಕಣ್ಣೀರು ಕತೆ, ಬಂದೆಯಾ ಅಮ್ಮಾ ಬಂದೆಯಾ, ಸಾಗರದ ಸಮಾಜವಾದಿ, ಬಂದಾರಪ್ಪ ಬಂದಾರೊ ನಮ್ಮವರಾ ಎಂಬ ಕವಿತೆಗಳು ಸಂಕಲನಗೊಂಡಿವೆ.

ಈ ಕೃತಿಗೆ ಖ್ಯಾತ ಸಂಗೀತಗಾರ ರಾಜೀವ ತಾರಾನಾಥರ ಬೆನ್ನುಡಿ ಇದೆ. ಒಬ್ಬ ಕವಿಯ ಕಾವ್ಯಯಾತ್ರೆ ಹೇಗಿರಬೇಕು, ಆತನ ಸಂವೇದನೆ ಯಾವ ಯಾವ ಬಂದರುಗಳನ್ನು ಮುಟ್ಟಬೇಕು, ಇದೆಲ್ಲದರ ಉತ್ತಮ ನಿದರ್ಶನ ಚಂದ್ರಶೇಖರ ಕಂಬಾರ, ಆತನ ಪ್ರಾಮುಖ್ಯತೆಯನ್ನು ಗುರುತಿಸಿದ ಮೊದಲಿಗರಲ್ಲಿ ನಾನೊಬ್ಬ, ಆವಾಗಿನಿಂದ ಆತನ ಬೆಳವಣಿಗೆ, ವೈವಿಧ್ಯ, ಹರಡುತ್ತಾ ಇರುವ ಕಾವ್ಯ ಕುತೂಹಲವನ್ನು ಗಮನಿಸುತ್ತಲೇ ಬಂದಿದ್ದೇನೆ.  ಜೊತೆಗೆ ಈಗಿನ ಸಂಕಲನದಲ್ಲಿ ಒಂದು ಮಾಗಿದ ಕಾವ್ಯ ಪ್ರತಿಭೆ, ತನ್ನದೇ ಆದ ಪ್ರತಿಭಾ ಯಾತ್ರೆಯನ್ನು ಮರುಗಮನಿಸಿ, ಹಿಗ್ಗಿ ತೃಪ್ತಿಪಡುವುದನ್ನು ನಾವು ಕಾಣುತ್ತೇವೆ ಎಂದು ಪ್ರಶಂಸಿಸಿದ್ದಾರೆ.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books