ಕಣ್ಣೀರು

Author : ವಿ. ಚಲಪತಿ

Pages 80

₹ 80.00




Year of Publication: 2019
Published by: ನೌಟಂಕಿ ಪ್ರಕಾಶನ
Address: ಕ್ರೇಜಿ ಫ್ರಾಗ್ ಮೀಡಿಯಾ, ಎಂಬೆಸ್ಸೆ ಸೆಂಟರ್, ಕುಮಾರ ಪಾರ್ಕ್‌ ವೆಸ್ಟ್‌, ಬೆಂಗಳೂರು
Phone: 9945440841

Synopsys

ಕಲ್ಪನೆ, ಕನಸು, ವಾಸ್ತವ, ಸಂಘರ್ಷಗಳ ಸಂಕಲಿತ ಭಾಗವೇ ’ಕಣ್ಣೀರು’. ಚಲಪತಿ ಅವರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕವನಗಳನ್ನು ರಚಿಸಿದ್ದಾರೆ. ’ಹೊಸ ತಲೆಮಾರು ಆನ್‌ಲೈನ್ ಜಗತ್ತಿನಲ್ಲಿ ಕಳೆದು ಹೋಗದೆ ಬದುಕಿನ ಆಫ್‌ಲೈನ್‌ನಲ್ಲಿರುವ ನೋವಿಗೆ ಮಾತು ಕೊಟ್ಟು ಬರೆಯುತ್ತಾರೆ. ಒದ್ದರು, ಬಯ್ದರು ಎಂದು ಕಣ್ಣೀರು ಹಾಕದೆ ಮೂಲೆಗೆ ಕೂರಿಸಿಬಿಡುತ್ತಾರೆ ಎಂಬ ಭಯದಿಂದ ಕಣ್ಣೀರು ಹಾಕುತ್ತಲೇ ಅದನ್ನು ದಾಟಿಕೊಳ್ಳಲು ಬೇಕಾದ ಸಾಧ್ಯತೆಗಳನ್ನು ಕೂಡ ಹುಡುಕಿಕೊಳ್ಳುವುದು ಇವರ ಕವಿತೆಗಳ ಶಕ್ತಿಯಾಗಿದೆ ಎನ್ನುತ್ತಾರೆ ರಘುನಂದನ ಬೇಲೂರು.

About the Author

ವಿ. ಚಲಪತಿ

ವೃತ್ತಿಯಲ್ಲಿ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರಾಗಿರುವ ಯುವ ಬರಹಗಾರ ವಿ. ಚಲಪತಿ ಅವರ ಚೊಚ್ಚಲ ಕವನ ಸಂಕಲನ ಕಣ್ಣೀರು. ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಇವರು ಕಾಲೇಜು ದಿನಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಿಗಿಕೊಂಡಿದ್ದಾರೆ. ಚಿಂತಾಮಣಿಯಲ್ಲಿ ನೆಲೆಸಿದ್ದಾರೆ.  ...

READ MORE

Related Books