ಕಾವ್ಯ ಬಂಗಾರ

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 124

₹ 0.00




Year of Publication: 2004
Published by: ದಲಿತ ಕವಿಗೋಷ್ಠಿ ಸಮಿತಿ
Address: ಮೈಸೂರು- 570015

Synopsys

‘ಕಾವ್ಯ ಬಂಗಾರ’ 2004ನೇ ದಸರಾ ಕವಿಗೋಷ್ಠಿಯಲ್ಲಿ ವಾಚಿಸಿದ ಕವಿತೆಗಳ ಸಂಕಲನ. ಈ ಕೃತಿಯನ್ನು ನಾಡಿನ ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಸಂಪಾದಿಸಿದ್ದಾರೆ. ಕನ್ನಡದ ಸಂದರ್ಭದಲ್ಲಿ ಆದಿಕವಿ ಪಂಪನಿಂದ ಹಿಡಿದು ವರ್ತಮಾನದ ತನಕ ಕಲ್ಪನೆಯ ವರ್ಣಮೇಳವೆಲ್ಲ ನುಡಿಯ ಬೆಡಗಿನಲ್ಲಿ ಕ್ರಾಂತಿಯ ಸೊಲ್ಲಾಗಿ, ಅನುಭಾವದ ಮಡುವಾಗಿ, ಪಥದರ್ಶನದ ದಾರಿದೀವಿಗೆಯಾಗಿದೆ. ಲಕ್ಷ್ಮೀಶ, ನಾರಾಣಪ್ಪರ ಕೈಯಲ್ಲಿ ಸಹಸ್ರವೀಣಾನಾದವಾಗಿ ಮೊರದಿದೆ. ಇಪ್ಪತ್ತನೆಯ ಶತಮಾನದಲ್ಲಿ ಹೊರನುಡಿ, ಹೊರ ಸಂಸ್ಕೃತಿಯ ಸಂಸ್ಪರ್ಶನದಿಂದ, ಹೊಸ ಚೈತನ್ಯದಿಂದ ಒಡಗೂಡಿ ಹಲವು ಸಂಸ್ಕಾರಗಳನ್ನು ಮೈಗೂಡಿಸಿಕೊಂಡಿದೆ. ಕನ್ನಡ ಕಾವ್ಯ ಲೋಕದ ಕವಿಗಳ ಸಾಲಿನಲ್ಲಿ ವಿರಾಜಮಾನರಾಗಿರುವ ಕುವೆಂಪು, ಬೇಂದ್ರೆಯವರು ನಮ್ಮ ಭಾಷೆಗೆ ಅನೂಹ್ಯವಾದ ನವುರು ಮತ್ತು ಸೂಕ್ಷ್ಮತೆಗಳನ್ನು ಪ್ರಾಪ್ತಗೊಳಿಸಿದ ಅಭಿಜಾತ ಕವಿಗಳಾಗಿದ್ದಾರೆ. ಆನಂತರದ ಕವಿಗಳು ಅತ್ಯಂತ ಸಮರ್ಥವಾಗಿ ಕಾವ್ಯದೇವಿಯ ಕೈಂಕರ್ಯಯನ್ನು ನಡೆಸಿದ್ದಾರೆ. ದಶಕಗಳು ಕಳೆದಂತೆ ಹಳೆಯ ಕಂದಾಚಾರಗಳ ಬಳಕೆ ತೆಗೆದು, ಧೂಳುದುಂಬು ಹೊಡೆದು ಕನ್ನಡ ಗುಡಿಯಲ್ಲಿ ಹೊಸ ರೀತಿಯ ಸುಪ್ರಭಾತವನ್ನು ಕವಿಗಳು ಮೊಳಗಿಸಿದ್ದಾರೆ. ಖಡ್ಗವಾಗಲಿ ಕಾವ್ಯ ಎಂದು ಅವರು ಗುಡುಗಿದ ಗುಡುಗು ಕೊಂಚ ಕ್ಷೀಣವಾದಂತೆ ತೋರಿದರೂ ಅದು ಬಿತ್ತಿದ ಚೈತನ್ಯದ ಬೀಜ ದಾಂಗುಡಿ ಇಡುತ್ತಿರುವುದನ್ನು ಯಾರೂ ನಿರ್ಲಕ್ಷಿಸಿಲಾರರು. ಇಷ್ಟಾಗಿಯೂ ಕನ್ನಡ ಕಾವ್ಯೋದ್ಯಾನ ಹಲವು ಕೊರಳುಗಳು ಹಾಡುವ ನಾದ ಮಂದಿರವೆಂಬುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ, ಈ ವಿಶಿಷ್ಟ ದಸರಾ ಕವಿಗೋಷ್ಠಿ ಕನ್ನಡ ನಾಡಿನ ನಾಲ್ಕೂ ದಿಕ್ಕುಗಳ ಕವಿಗಳನ್ನು ಸಮಾವೇಶಗೊಳಿಸಲು ಪ್ರಯತ್ನಿಸಿದೆ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books