ಕನ್ನಡದ ಅನನ್ಯ ಲೇಖಕರಲ್ಲೊಬ್ಬರಾದ ಕೇಶವ ಮಳಗಿಯವರ ಬಹು ನಿರೀಕ್ಷೆಯ ಕೃತಿ ಶಾತವಾಹನ ಹಾಲನ ಗಾಹಾ ಸತ್ತಸಯೀ ಕವನಗಳನ್ನೊಳಗೊಂಡ ‘ಬದುಕು ಮಾಯೆಯ ಆಟ’. ಕ್ರಿ.ಶ. ಎರಡನೆಯ ಶತಮಾನದ ಹಿಂಚುಮುಂಚಲ್ಲಿ ರಚನೆಯಾದ ಈ ಕೃತಿಯು ಒಂದು ಶೃಂಗಾರ ಕಾವ್ಯ. ಇಲ್ಲಿ ಹೆಂಗಳೆಯರ ಅಳಲು, ಅಗಲಿಕೆಯ ನೋವು, ದುಃಖ, ಯಾತನೆ, ಅಸೂಯೆ, ಮಿಲನದಲ್ಲಿನ ಸುಖಗಳು ಅಡಗಿವೆ. ಮುಗ್ಧ ತರುಣಿಯರಂತೆಯೇ ಚಾಲಾಕಿ, ಪಳಗಿದ ತಾರುಣ್ಯ ದಾಟಿದ ಹೆಂಗಸರು, ರಸಿಕರನ್ನೆ ಸೆಳೆದು ಅವರ ಪತ್ನಿಯರ ಕೆಂಗಣ್ಣಿಗೆ ಗುರಿಯಾಗುವ ಕರೆವೆಣ್ಣುಗಳು, ಪತ್ನಿಯರ ಕಿಚ್ಚು ಹೆಚ್ಚಿಸುವ ಸವತಿಯರು ಇಲ್ಲಿದ್ದಾರೆ. ಅವರ ವರ್ತನೆ ಕೆಲವೆಡೆ ಸಭ್ಯ ಓದುಗರು ಅಶ್ಲೀಲವೆಂದು ಮೂಗು ಮುರಿಯುವಷ್ಟು ಶೃಂಗಾರದ ಲೇಪ ಪದ್ಯಗಳ ಸ್ವಾರಸ್ಯವನ್ನು ಹೆಚ್ಚಿಸಿದೆ.
ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...
READ MORE