ನಂಬುಗೆಯ ಕೊಡ-ಎಂಬುದು ಕವಿ ಕಿರಣ್ ಸಿಡ್ಲೇಹಳ್ಳಿ ಞವರ ಕವನ ಸಂಕಲನ. ಒಟ್ಟು 48 ಕವನಗಳಿವೆ. ಕವಿ ತಮ್ಮ ಜೀವನದಲ್ಲಿ ಕಂಡುಂಡ ಅನುಭವಕ್ಕೆ ಅನುಭಾವದ ಲೇಪ ಮೂಡಿಸಿ ವಾಸ್ತವತೆಯನ್ನು ಕವಿತೆಗಳಲ್ಲಿ ತೋರಿದ್ದಾರೆ. ಕೆಲವು ಕವನಗಳು ಕಥನ ಕವನದತ್ತ ವಾಲಿರುವುದನ್ನು ಕಾಣಬಹುದು. ವಸ್ತು ವೈವಿಧ್ಯತೆಯಿಂದ ಹಾಗೂ ನಿರೂಪಣಾ ಶೈಲಿಯಿಂದ ಇಲ್ಲಿಯ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ.
ಸಾಹಿತಿ ನಟರಾಜ್ ಎಸ್. ಅವರು ಕೃತಿಗೆ ಬೆನ್ನುಡಿ ಬರೆದು ‘ಪ್ರತಿ ಕವನವೂ ಓದುಗನನ್ನು ಚಿಂತನೆಗೆ ಹಚ್ಚುತ್ತದೆ. ಗಹನ ವಿಚಾರಗಳನ್ನು ಸರಳ ಪ್ರತಿಮೆಗಳ ಮೂಲಕ ಸಾಂದ್ರೀಕರಿಸುವ, ಅಮೂರ್ತ ಚಿಂತನೆಗಳನ್ನು ಮೂರ್ತ ರೂಪಕಗಳ ಮೂಲಕ ಕೈಗೆಟುಕುವಂತೆ ಮಾಡುವ ಕವಿಯ ದಕ್ಷತೆ ಕೃತಿಯ ಹಲವೆಡೆ ವೇದ್ಯವಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಕವಿ ಕಿರಣ್ ಸಿಡ್ಲೇಹಳ್ಳಿ ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಿಡ್ಲೇಹಳ್ಳಿಯವರು. ರತ್ನಕಂದ -ಇವರ ಕಾವ್ಯನಾಮ. ತಂದೆ ಸಿದ್ಧಲಿಂಗಯ್ಯ ತಾಯಿ ರತ್ನಮ್ಮ. ಕಿರಣ್ ಅವರು ಎಂ.ಎ,ಬಿ.ಇಡಿ, ಪದವೀಧರರು. ಕಳೆದ 4 ವರ್ಷಗಳಿಂದ ಕ್ಲಸ್ಟರ್ ಸಂಪನ್ಮೂಲ ಸಂಯೋಜಕರಾಗಿದ್ದಾರೆ. ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯದ ವಿವಿಧೆಡೆ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ಶ್ರಿ ಮುತ್ತುಸ್ವಾಮಿ ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಮುಕ್ತಕಗಳ ರಚನೆ ಮಾಡಿದ್ದಾರೆ. ಪ್ರಸ್ತುತ ರಾಜ್ಯ ಮುಕ್ತಕ ಕವಿ ಪರಿಷತ್ತಿನ ಕಾರ್ಯದರ್ಶಿಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಮುಕ್ತಕಗಳನ್ನು ವಿವಿಧ ಛಂದೋನಿಯಮದಲ್ಲಿ ರಚಿಸಿದ್ದಾರೆ. ಕೃತಿಗಳು: .ಮುಕ್ತಕ ಸುಧೆ (ಮುಕ್ತಕಗಳ ಸಂಕಲನ) ,ಭಾವಕಿರಣ,ನಂಬುಗೆಯ ಕೊಡ ಪ್ರಶಸ್ತಿ-ಗೌರವಗಳು: ಭಾರತ್ ಸ್ಕೌಟ್ ನಿಂದ ...
READ MORE