ನಾದಗಳು ನುಡಿಯಾಗಲೇ

Author : ಚಂದ್ರಶೇಖರ ಕಂಬಾರ

Pages 176

₹ 150.00




Year of Publication: 2013
Published by: ಅಂಕಿತ ಪುಸ್ತಕ
Address: ಪ್ರಕಾಶಕರು : ಅಂಕಿತ ಪುಸ್ತಕ, #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

ಈ ಸಂಕಲನದಲ್ಲಿ ಆಗಾಗ ನಾಟಕ, ಚಲನಚಿತ್ರಗಳಿಗಾಗಿ ಬರೆದ ಹಾಡುಗಳು ಇವೆ, ಸಿರಿಸಂಪಿಗೆ ನಾಟಕವನ್ನು ನಾನು ಮೊದಲು ದೊಡ್ಡಾಟವಾಗಿ ಬರೆಯಬೇಕೆಂದಿದ್ದೆ, ಆ ನಾಟಕಕ್ಕಾಗಿ ಬರೆದ ಹಾಡುಗಳು : ಕಾಂತನಿಲ್ಲದ ಮ್ಯಾಲೆ, ನಾ ಗರತಿ, ಅಗಲಿ ಇರಲಾರೆನೊ ನಿನ್ನನ್ನಾ, ಹಾರಿ ಬಂದನೇ, ಯಾರೂ ಬಂದವರಾ, ಜೋ ಜೋ ನಾಗರರಾಯಗೆ, ಯಾರವ್ವ ಈ ಚೆಲುವ ಆಮೇಲೆ ಸಿರಿಸಂಪಿಗೆಯನ್ನು ಯಕ್ಷಗಾನವಾಗಿ ಬರೆದುದರಿಂದ ಜೋ ಜೋ ನಾಗರರಾಯಗೆ ಹೊರತಾಗಿ ಉಳಿದ ಹಾಡುಗಳನ್ನು ನಾಟಕದಿಂದ ಕೈಬಿಟ್ಟೆ. ಆ ಏಳೂ ಹಾಡುಗಳು ಇಲ್ಲಿವೆ. ಇಲ್ಲಿ ಪುಷ್ಕಳವಾದ ಛಂದೋವೈವಿಧ್ಯವಿದೆ. ಅಷ್ಟೇ ವಿಪುಲವಾಗಿ ಛಂದಸ್ಸಿನಲ್ಲಿ ನಾನು ಮಾಡಿದ ಪ್ರಯೋಗಗಳೂ ಇವೆ. ಅವೆಲ್ಲಾ ಸೇರಿ“ನಾದಗಳು ನುಡಿಯಾಗಲೇ? ಕೃತಿಯನ್ನು ಹೊರತರಲಾಗಿದೆ ಎನ್ನುತ್ತಾರೆ. ಲೇಖಕ ಚಂದ್ರಶೇಖರ ಕಂಬಾರ .

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books