ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಅವರ ಹನಿಗವನಗಳ ಸಂಕಲನ- ನುಡಿ ಕಿರಣ. ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಭಾವ ಲಹರಿಯನ್ನು ಹರಿಸಿದ ನುಡಿಮುತ್ತುಗಳ ಸಂಕಲನವಿದು. "ನೋಟ ಒಂದೇ ಸಾಕು ಪ್ರೀತಿ ಚಿಗುರಲು, ರೋಷ ಒಂದೇ ಸಾಕು, ಪ್ರೀತಿ ಕಮರಲು" ಎರಡೇ ಸಾಲಿನಲ್ಲಿ ಅರ್ಥಪೂರ್ಣ ವಾಗಿ ನಡೆಯನ್ನು ಲೇಖಕರು ಗುರುತಿಸಿದ್ದಾರೆ. ಹೀಗೆ ಹತ್ತು ಹಲವಾರು ಪದಗುಚ್ಛ ದಲ್ಲಿ ಈ ನುಡಿಮುತ್ತುಗಳು ಓದುಗರನ್ನು ಸೆಳೆಯುತ್ತವೆ. ಕಲಬುರ್ಗಿ ಜಿಲ್ಲೆಯ ಮರತೂರಿನ ಸರಕಾರಿ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಚಿತ್ಕಳಾ ಮಠಪತಿಯವರು ಮುನ್ನುಡಿ ಬರೆದಿದ್ದು, ಕಲಬುರ್ಗಿಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಿಳಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ನಾಗೇಂದ್ರ ಮಸೂತಿ ಅವರು ಬೆನ್ನುಡಿ ಬರೆದಿದ್ದಾರೆ.
ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಅವರು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಾಳಗಿಯವರು. ತಂದೆ ಗುರುಪಾದಪ್ಪ, ತಾಯಿ ಗುರು ಬಾಯಿ. ಕಾಳಗಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ನಂತರ ಬಿಎ ಪದವಿವರೆಗೆ ಕಲಬುರಗಿಯಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ (ಹಿಂದಿ) ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ (ಕನ್ನಡ) ಪದವಿ ಪಡೆದರು. ಗುಲಬಗಾ ವಿವಿಯಿಂದ (2006) ಪಿಎಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ತಾಲೂಕು (2001-08) ಅಧ್ಯಕ್ಷರಾಗಿ, ಕಲಬುರ್ಗಿ ಜಿಲ್ಲಾ ಕ.ಸಾ.ಪರಿಷತ್ತಿನ ಗೌರವ (2008-12) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಲಬುರಗಿಯ ಶರಣಬಸವೇಶ್ವರ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ...
READ MORE