`ಮಂಜಿನ ಮಣಿ ಸಾಲು' ರೇಣುಕಾ ಕೋಡಗುಂಟಿ ಅವರ ಹಾಯ್ಕು ಸಂಕಲನವಾಗಿದೆ. ಹಾಯ್ಕು ಇದೊಂದು ಜಪಾನಿ ಸಾಹಿತ್ಯದ ಕಾವ್ಯ ಪ್ರಕಾರವಾಗಿದೆ. ಇದನ್ನು ಕನ್ನಡದಲ್ಲಿ ಹೈಕು, ಹಾಯ್ಕು, ಹಾಯಿಕು ಎಂದೆಲ್ಲಾ ಹೇಳುತ್ತಾರೆ. ಇದು 5-7-5 ಅಕ್ಷರಗಳುಳ್ಳ ಮೂರು ಸಾಲಿನ ಪದ್ಯವಾಗಿದೆ. ಹೀಗೆ ಅಕ್ಷರಗಳನ್ನು ಕ್ರಮಬದ್ಧವಾಗಿ ತರುತ್ತಾ ಅದರೊಂದಿಗೆ ಅರ್ಥವನ್ನು ಕಟ್ಟಿಕೊಡುವುದು ಒಂದು ರೀತಿಯಲ್ಲಿ ಅಕ್ಷರಗಳೊಂದಿಗಿನ ಆಟವೆನ್ನಬಹುದು. ಕೆಲವರು ಈ ನಿಯಮವನ್ನು ಕೈ ಬಿಟ್ಟು ಹಾಯ್ಕುಗಳನ್ನು ಸ್ವತಂತ್ರವಾಗಿಯೂ ರಚಿಸಿದ್ದಾರೆ. ಕನ್ನಡದಲ್ಲಿ ಈ ಹಾಯ್ಕು ಪ್ರಕಾರ ಇತ್ತೀಚೆಗೆ ಬಹಳ ಬರಹಗಾರರನ್ನು ಸೆಳೆಯುತ್ತಿದೆ ಅಂದರೆ ಹಾಯ್ಕು ರಚನೆಯತ್ತ ಬರಹಗಾರರು ಆಸಕ್ತಿ ತೋರುತ್ತಿದ್ದಾರೆ. ಕನ್ನಡದಲ್ಲಿ ಹಾಯ್ಕುಗಳ ಕುರಿತು ಹಲವಾರು ಸಂಕಲನಗಳು ಕೂಡ ಬಂದಿವೆ. ಈ ಸಾಲಿನಲ್ಲಿ ನನ್ನ ಈ ಹಾಯ್ಕು ಸಂಕಲನವು ಸೇರುತ್ತಿರುವುದು ಸಂತೋಷದ ಸಂಗತಿ. ಒಂದು ಚಿಕ್ಕ ಪದ್ಯದಲ್ಲಿ ಹಿರಿದಾದ ಅರ್ಥವನ್ನು ಹೇಳುವುದೆ ಹಾಯ್ಕುವಿನ ಮೂಲಗುಣ. ಜಪಾನಿನಲ್ಲಿ ಝೆನ್ ಬೌದ್ದರು ತಮ್ಮ ತತ್ವಗಳನ್ನು ಪ್ರಸಾರ ಮಾಡುವುದಕ್ಕಾಗಿ ಈ ಹಾಯ್ಕು ಪ್ರಕಾರವನ್ನು ಬಳಕೆಗೆ ತಂದರು ಎಂದು ಹೇಳಲಾಗುತ್ತದೆ. ದಿನಗಳು ಕಳೆದಂತೆ ಎಲ್ಲಾ ವಿಷಯಗಳನ್ನು ಒಳಗೊಂಡಂತ ಹಾಯ್ಕುಗಳು ಬಂದವು. ಸುಮಾರು 17ನೇ ಶತಮಾನದಲ್ಲಿ ‘ಮಾತ್ಸು ಓ ಬಾಶೋ’ ಎಂಬ ತತ್ವಜ್ಞಾನಿ ಈ ಹಾಯ್ಕು ಸಾಹಿತ್ಯ ರೂಪಕ್ಕೆ ಒಂದು ನಿಯಮ ಬದ್ದವಾದ ಚೌಕಟ್ಟನ್ನು ರೂಪಿಸಿದನು. ಹಾಯ್ಕು ಮೂರು ಪಾದಗಳಿಂದ ಕೂಡಿದ್ದು, ಮೊದಲ ಪಾದದಲ್ಲಿ ಐದು ಅಕ್ಷರಗಳು, ಎರಡನೆ ಪಾದದಲ್ಲಿ ಏಳು ಅಕ್ಷರಗಳು, ಮೂರನೆ ಪಾದದಲ್ಲಿ ಐದು ಅಕ್ಷರಗಳು ಹೀಗೆ ಒಟ್ಟು ಹದಿನೇಳು ಅಕ್ಷರಗಳ ರೂಪವನ್ನು ನಿಗದಿಪಡಿಸಿದನು. ಈ ಮಾತ್ಸು ಓ ಬಾಶೋ ಎಂಬಾತ ಜಪಾನಿನ ಶ್ರೇಷ್ಠ ಕವಿಯಾಗಿದ್ದಾನೆ.
ರೇಣುಕಾ ಕೋಡಗುಂಟಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಅಯ್ಯಪ್ಪ ಕೋಡಗುಂಟಿ, ತಾಯಿ ಶಾಂತಮ್ಮ ಕೋಡಗುಂಟಿ, ರೇಣುಕಾ ಕೋಡಗುಂಟಿಯವರು ವಿದ್ಯಾಭ್ಯಾಸ ಎಂ.ಎ, ಎಂ.ಫಿಲ್, ಗೃಹಿಣಿ. ಸಾಹಿತ್ಯ, ಸಂಶೋಧನೆಯಲ್ಲಿ ಅಪಾರ ಆಸಕ್ತಿ. ‘ಕೃತಿ ದೀವಿಗೆ ಟ್ರಸ್ಟ್, ನಡೆಸುತ್ತಿದ್ದಾರೆ. ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ. ಕೃತಿಗಳು: ಬಳಪದ ಚೂರು(ಕವನ ಸಂಕಲನ-2011), ‘ನಮ್ಮ ಕನ್ನಾಡ ಪ್ರೇಮದ ಜೋತಿ (2011-ರಾಯಚೂರು ಜಿಲ್ಲೆಯ ಕಸಬಾ ಲಿಂಗಸೂಗೂರಿನ ಅಂಪವ್ವ ಪೂಜಾರಿ ಅವರು ಹಾಡಿರುವ ಜನಪದ ಹಾಡುಗಳ ಸಂಗ್ರಹ), ಅದೇ ಗಾಯಕರು ಹಾಡಿರುವ ‘ಇಜಬೂಪನ ಪದ’ (2019- ಎನ್ನುವ ಜನಪದ ಖಂಡಕಾವ್ಯ), ‘ಭಾಷಾವಿಜ್ಞಾನ ಸಂಶೋಧನೆ ಇಂದು’ (ಸಂಶೋಧನಾ ಪ್ರಬಂಧಗಳ ಸಂಪಾದನೆ-2011), ಕರ್ನಾಟಕದಲ್ಲಿ ಶವಸಂಸ್ಕಾರ (ಸಂಶೋಧನಾತ್ಮಕ ...
READ MORE