ಪ್ರೇಮದ ಕುರಿತಾದ ಮೂರ್ನಾಲ್ಕು ಸಾಲುಗಳ ಗುಚ್ಛ. ಈ ಕೃತಿ ಉಚಿತ ಇ-ಪುಸ್ತಕವಾಗಿ ಮಾತ್ರ ಲಭ್ಯ. ಸಂಕಲನದಲ್ಲಿ ಒಟ್ಟು 161 ಕವಿತೆಗಳಿದ್ದು, ಕಾವ್ಯಾಂಶ ತುಂಬಿಕೊಂಡಿವೆ. 2008-14 ಅವಧಿಯಲ್ಲಿ ತಾವು ವಿದ್ಯಾರ್ಥಿಯಾಗಿದ್ದಾಗ ಬರೆದ ಕವಿತೆಗಳಿವು ಎಂದು ಕವಿ ಎಚ್.ಕೆ. ಶರತ್ ಕೃತಿಗೆ ಬರೆದ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಸಂಕಲನದ ಕೆಲ ಕವಿತೆಗಳು ; 1. ‘ನೀನು ದೇವತೆ...’ ಹಾಗೆಂದು ಹೊರೆ ಹೊರಿಸದು ನನ್ನ ಕವಿತೆ 2. ಚಳಿಯ ಸೆರಗು ಸರಿಸಿದ ಸೂರ್ಯ... ಮುಂಜಾನೆ ಮಧುಚಂದ್ರ! 3. ಮೌನದ ಕಣಿವೆಯಲ್ಲಿ ಕಳೆದು ಹೋದ ಮಾತುಗಳು ನನ್ನ ಅವಳ ನಡುವಿನ ಸಂಬಂಧಕ್ಕೆ ಸಾಕ್ಷಿಗಳು.
ಮೂಲತಃ ಹಾಸನದ ಎಚ್.ಕೆ. ಶರತ್, ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಹಾಗೂ ಎಂ.ಟೆಕ್ ಪೂರ್ಣಗೊಳಿಸಿದ್ದಾರೆ. ಈಗ ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, 'ಮೊದಲ ತೊದಲು', 'ಬೆಳಕಿನ ಬೇಲಿ', 'ಗೋಡೆಗಳ ನಡುವೆ...' ಮತ್ತು 'ಕುಶಲೋಪರಿ' ಪ್ರಕಟಿತ ಕೃತಿಗಳು. ಸದ್ಯ ಹಾಸನ ನಿವಾಸಿಯಾಗಿರುವ ಎಚ್.ಕೆ. ಶರತ್ ಅವರು ’ಪ್ರಜೋದಯ ಪ್ರಕಾಶನ’ ನಡೆಸುತ್ತಿದ್ದಾರೆ.’ ಪ್ರಜೋದಯ’ವು ಎಂಬ ಆನ್‌ಲೈನ್‌ನಲ್ಲಿ ಪುಸ್ತಕ ಮಾರಾಟ ನಡೆಸುತ್ತಿದೆ. ...
READ MORE1. ‘ನೀನು ದೇವತೆ...’ ಹಾಗೆಂದು ಹೊರೆ ಹೊರಿಸದು ನನ್ನ ಕವಿತೆ 2. ಚಳಿಯ ಸೆರಗು ಸರಿಸಿದ ಸೂರ್ಯ... ಮುಂಜಾನೆ ಮಧುಚಂದ್ರ! 3. ಮನಸ್ಸಿನ ಕುಮ್ಮಕ್ಕು ಪ್ರೀತಿಸಲು ನೀಡುವುದು ಹಕ್ಕು 4. ಮೌನದ ಕಣಿವೆಯಲ್ಲಿ ಕಳೆದು ಹೋದ ಮಾತುಗಳು ನನ್ನ ಅವಳ ನಡುವಿನ ಸಂಬಂಧಕ್ಕೆ ಸಾಕ್ಷಿಗಳು 5. ಕಣ್ಣಲ್ಲಿ ನೀರು ತುಂಬಿದೆ ನೀ ಸಿಕ್ಕ ಖುಷಿಗೆ ಎದೆಯನ್ನು ನೋವು ತೊರೆದಿದೆ ನೀ ನಕ್ಕ ಪರಿಗೆ 6. ಅವಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ, ನನ್ನ ಏಕಾಂತವನ್ನು ಒಂಟಿ ಮಾಡಿ. 7. ಒಡಲೊಳಗಿನ ಉನ್ಮಾದ ನಿನ್ನೊಲವು ದಯಪಾಲಿಸಿದ ಪ್ರಸಾದ 8. ಅರಿಯದೆ ಒಂದಾದ ಮೌನ ಕಣಿವೆಗಳ ನಡುವಲ್ಲಿ ಚೌಕಟ್ಟು ತೆಳುವಾಗುತ್ತಿದೆ 9. ಒಳಗೆ ಹುಟ್ಟಿ ಒಡಲೊಳಗೆ ಸಾಯುವ ಸಂಭ್ರಮಗಳ ಎದುರು ಅವಳು ನಿಂತಿದ್ದಾಳೆ 10. ಅಲೆ ಬೋಧಿಸುತ್ತಿದೆ… ದಂಡೆ ಆಲಿಸುತ್ತಿದೆ…